ಹೊಸ ವರ್ಷ, ಹೊಸ ಭರವಸೆ! ಸಿಲಿಕಾನ್ ಸಿಟಿಯ ಬೀದಿಗಳಲ್ಲಿ ಸಂಭ್ರಮದ ಅಲೆ. 2026ಕ್ಕೆ ಅದ್ಧೂರಿ ಮುನ್ನುಡಿ ಬರೆದ ಬೆಂಗಳೂರಿಗರು.
ಬೆಂಗಳೂರು: ಜಗಮಗಿಸುವ ಬಣ್ಣದ ಬೆಳಕು… ರಂಗೇರಿದ ರಾತ್ರಿ… ಮತ್ತಿನ ಗಮ್ಮತ್ತಿನಲ್ಲಿ ನೆರೆದ ಸಹಸ್ರಾರು ಜನರು… ‘ಹ್ಯಾಪಿ ನ್ಯೂ ಇಯರ್’ ಎಂಬ ಮುಗಿಲೆತ್ತರದ ಘೋಷಣೆ… ಚುಂಬನ, ಆಲಿಂಗನ… ಜಾತಿ, ಧರ್ಮ, ಲಿಂಗ ಭೇದವಿಲ್ಲದ ಸಮ್ಮಿಲನ… ಶುಭಾಶಯಗಳ ವಿನಿಮಯ.. ಇದು ರಾಜಧಾನಿಯಲ್ಲಿ’ ಹೊಸ ವರ್ಷ…

















