ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ವಿಜಯದುಂದುಭಿ ನಿಶ್ಚಿತ: ಶೂನ್ಯ ಅಭಿವೃದ್ಧಿಯ ಕಾಂಗ್ರೆಸ್‌ಗೆ ಜನತೆ ಪಾಠ ಕಲಿಸಲಿದ್ದಾರೆ – ಬಿ.ವೈ. ವಿಜಯೇಂದ್ರ

ದಾವಣಗೆರೆ: “ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಖಾಡದಲ್ಲಿ ಬಿಜೆಪಿ ಪರವಾದ ಅಲೆ ಎದ್ದಿದೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಂಘಟನಾ ಶಕ್ತಿ ಮತ್ತು ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿರುವ ಜನಬೆಂಬಲವನ್ನು ನೋಡಿದರೆ ಪಕ್ಷದ ಅಭೂತಪೂರ್ವ ವಿಜಯ ನಿಶ್ಚಿತ ಎಂದು ಮನವರಿಕೆಯಾಗುತ್ತಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದ ಉಪಚುನಾವಣಾ ಪ್ರಚಾರದ ಅಂಗವಾಗಿ ಇಂದು ಆಯೋಜಿಸಲಾಗಿದ್ದ ೮ ಶಕ್ತಿ ಕೇಂದ್ರಗಳ ಚಟುವಟಿಕೆಗಳ ಪರಿಶೀಲನಾ ಸಭೆಯನ್ನು ನಡೆಸಿ ಅವರು ಮಾತನಾಡಿದರು.

ಸಭೆಯಲ್ಲಿ ಮಾತನಾಡಿದ ಅವರು, “ರಾಜ್ಯದ ಇಂದಿನ ಕಾಂಗ್ರೆಸ್ ಸರ್ಕಾರ ಶೂನ್ಯ ಅಭಿವೃದ್ಧಿಯ ಸಾಧನೆ ಮಾಡುತ್ತಿದೆ. ಭ್ರಷ್ಟಾಚಾರವೇ ಈ ಸರ್ಕಾರದ ಮೂಲಮಂತ್ರವಾಗಿದ್ದು, ಜನಹಿತವನ್ನು ಮರೆತಿದೆ. ಈ ಉಪಚುನಾವಣೆಯಲ್ಲಿ ದಾವಣಗೆರೆಯ ಪ್ರಜ್ಞಾವಂತ ಮತದಾರರು ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದು ಖಚಿತ” ಎಂದು ಕಿಡಿಕಾರಿದರು. ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಉತ್ಸಾಹವೇ ನಮ್ಮ ಶಕ್ತಿ ಎಂದು ಶ್ಲಾಘಿಸಿದರು.

ಈ ಸಂಘಟನಾ ಸಭೆಯಲ್ಲಿ ಪ್ರಮುಖ ನಾಯಕರುಗಳಾದ: ಶ್ರೀ ಅರಗ ಜ್ಞಾನೇಂದ್ರ ಹಾಗೂ ಶ್ರೀ ಶ್ರೀವತ್ಸ (ಶಾಸಕರು), ಶ್ರೀ ರಾಜಶೇಖರ್ ನಾಗಪ್ಪ (ಜಿಲ್ಲಾಧ್ಯಕ್ಷರು), ಶ್ರೀ ಧನಂಜಯ್ ಸರ್ಜಿ (ವಿಧಾನ ಪರಿಷತ್ ಸದಸ್ಯರು), ಶ್ರೀ ರೇಣುಕಾಚಾರ್ಯ (ಮಾಜಿ ಸಚಿವರು), ಶ್ರೀ ಅಜಯ್ ಕುಮಾರ್ ಮತ್ತು ಶ್ರೀ ಜಿ.ಬಿ. ವಿನಯ್ ಕುಮಾರ್

ಸೇರಿದಂತೆ ಶಕ್ತಿ ಕೇಂದ್ರಗಳ ಪ್ರಮುಖರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಸಾಧನೆಗಳನ್ನು ತಲುಪಿಸುವಂತೆ ಇದೇ ವೇಳೆ ಕರೆ ನೀಡಲಾಯಿತು.

  • Related Posts

    ಮೈಸೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ‘ದಿಶಾ’ ಸಭೆ; ಅಭಿವೃದ್ಧಿ ಕಾಮಗಾರಿಗಳ ಪರಾಮರ್ಶೆ

    ಮೈಸೂರು: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಇಂದು ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ ಸಮಿತಿ) ಸಭೆ ಜರುಗಿತು.Contentsಸಭೆಯ ಪ್ರಮುಖಾಂಶಗಳು:ಭಾಗವಹಿಸಿದ್ದ ಗಣ್ಯರು: ಈ ಮಹತ್ವದ…

    Continue reading
    ಎಲ್‌ಪಿಜಿ ಹಾಗೂ ಆಟೋ ಗ್ಯಾಸ್ ಸಮಸ್ಯೆಗಳ ಕುರಿತು ಸಚಿವ ಕೆ.ಹೆಚ್. ಮುನಿಯಪ್ಪ ಮಹತ್ವದ ಸಭೆ

    ಬೆಂಗಳೂರು: ವಸಂತನಗರದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ಇಂದು ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ತೈಲ ಸಂಸ್ಥೆಗಳ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಜರುಗಿತು.Contentsಸಭೆಯ ಪ್ರಮುಖಾಂಶಗಳು:ಭಾಗವಹಿಸಿದ್ದ…

    Continue reading

    Leave a Reply

    Your email address will not be published. Required fields are marked *