ಕುಮಟಾ-ಶಿರಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ: ಡಿಸೆಂಬರ್ 30 ರಿಂದ ಬಸ್ ಸಂಚಾರ ಪುನರಾರಂಭ – ಜಿಲ್ಲಾಧಿಕಾರಿ ಆದೇಶ

ಶಿರಸಿ:-ಕಾರವಾರ, ಡಿ.29:- ಕುಮಟಾ-ಶಿರಸಿ, (sirsi) ರಾಷ್ಟ್ರೀಯ ಹೆದ್ದಾರಿ-766 ಇ ರಸ್ತೆಯಲ್ಲಿ ನಿಷೇಧಿಸಲಾದ ಬಸ್ ಸಂಚಾರವನ್ನು , ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ , ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಹಾಗೂ ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾರವಾರ ರವರ ವರದಿ ಆಧಾರದ ಮೇಲೆ ಸದರಿ ರಸ್ತೆಯಲ್ಲಿ 30-12-2026 ರಿಂದ ಬಸ್ ಸಂಚಾರಕ್ಕೆ ಅನುವು ಮಾಡಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.

ಸಂಚಾರ ಸಂದರ್ಭದಲ್ಲಿ ಬಸ್ ಹೊರತುಪಡಿಸಿ ಬೇರೆ ಭಾರಿ ವಾಹನಗಳು ಸದರಿ ರಸ್ತೆಯಲ್ಲಿ ಸಂಚರಿಸತಕ್ಕದ್ದಲ್ಲ. ಮತ್ತು ಕಾಮಗಾರಿ ಪ್ರಗತಿಯಲ್ಲಿರುವ ಪ್ರದೇಶದಲ್ಲಿ ವೇಗದ ಮೀತಿ 20 ಕಿ.ಮೀ ಗೆ ಸೀಮಿತವಾಗಿರಬೇಕು.

 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ರಸ್ತೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ವೇಗದ ಮಿತಿ ಫಲಕ, ರಸ್ತೆ ತಿರುವು ಪ್ರದೇಶದಲ್ಲಿ ಅಗತ್ಯ ಸೂಚನಾ ಫಲಕಗಳು, ಇನ್ನೀತರ ಅಗತ್ಯ ಸರಕ್ಷಾ ಕ್ರಮಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

  • Related Posts

    ಮೈಸೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ‘ದಿಶಾ’ ಸಭೆ; ಅಭಿವೃದ್ಧಿ ಕಾಮಗಾರಿಗಳ ಪರಾಮರ್ಶೆ

    ಮೈಸೂರು: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಇಂದು ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ ಸಮಿತಿ) ಸಭೆ ಜರುಗಿತು.Contentsಸಭೆಯ ಪ್ರಮುಖಾಂಶಗಳು:ಭಾಗವಹಿಸಿದ್ದ ಗಣ್ಯರು: ಈ ಮಹತ್ವದ…

    Continue reading
    ಎಲ್‌ಪಿಜಿ ಹಾಗೂ ಆಟೋ ಗ್ಯಾಸ್ ಸಮಸ್ಯೆಗಳ ಕುರಿತು ಸಚಿವ ಕೆ.ಹೆಚ್. ಮುನಿಯಪ್ಪ ಮಹತ್ವದ ಸಭೆ

    ಬೆಂಗಳೂರು: ವಸಂತನಗರದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ಇಂದು ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ತೈಲ ಸಂಸ್ಥೆಗಳ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಜರುಗಿತು.Contentsಸಭೆಯ ಪ್ರಮುಖಾಂಶಗಳು:ಭಾಗವಹಿಸಿದ್ದ…

    Continue reading

    Leave a Reply

    Your email address will not be published. Required fields are marked *