APK ವಂಚನೆ ಜಾಲ: ವಾಹನ ಮಾಲೀಕರೇ ಇತ್ತ ಗಮನಿಸಿ!

ಬೆಂಗಳೂರು: ಇಂದಿನ ದಿನಮಾನಗಳಲ್ಲಿ ತಂತ್ರಜ್ಞಾನವು ನಕಾರಾತ್ಮಕವಾಗಿಯೂ ಹೆಚ್ಚು ಬಳಕೆ ಆಗುತ್ತಿದೆ. ಅದಕ್ಕೀಗಾಗಲೇ ಸಾಕಷ್ಟು ಪುರಾವೆಗಳು ನಮ್ಮ ಮುಂದಿವೆ. ಸೈಬರ್ ವಂಚಕರ ಹಾವಳಿ ಹೆಚ್ಚುತ್ತಿದ್ದು, ಇವರು ಹೊಸ ಹೊಸ ವಿಧಾನಗಳ ಮೂಲಕ ಎಪಿಕೆ ಫೈಲ್ ಲಿಂಕ್ ಕಳುಹಿಸಿ ಜನರನ್ನು ವಂಚಿಸುವ ಯತ್ನ ಮುಂದುವರಿಸಿದ್ದಾರೆ. ಹೊಸ ವರ್ಷದ ಗಿಫ್ಟ್ ಕೂಪನ್, ವಿಷ್ ಹಾಗೂ ಇತರ ಹೆಸರಿನಲ್ಲಿ ಎಪಿಕೆ ಲಿಂಕ್ ಕಳಹಿಸಿ ವಂಚಿಸುತ್ತಿದ್ದಾರೆ. ಇದೀಗ ವಾಹನಗಳ ನಿಯಮ ಉಲ್ಲಂಘನೆ ಕಾರಣವೊಡ್ಡಿ ಟ್ರಾಫಿಕ್ ಪೊಲೀಸರು ಕಳುಹಿಸಿದಂತೆ ಟೆಕ್ಸ್ಟ್‌ ಮೆಸೆಜ್‌ನಲ್ಲಿ ಎಪಿಕೆ ಲಿಂಕ್ ಕಳುಹಿಸಿ ವಾಹನ ಮಾಲೀಕರಿಂದ ಸುಲಿಗೆಗೆ ಮುಂದಾಗಿದ್ದಾರೆ.

ಹೌದು, ವಾಹನಗಳ ಮಾಲೀಕರಿಗೆ ಇ-ಚಲನ್ ರೀತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಸಂದೇಶಗಳನ್ನು ಕಳುಹಿಸುತ್ತಿದ್ದಾರ.ಎ ಅಲ್ಲಿನ ಲಿಂಕ್ ಕ್ಲಿಕ್ ಮಾಡಿ ನೋಡಿದರೆ ಅಥವಾ ಬಿಟಿಪಿ ಅಧಿಕೃತ ಆಪ್, ಜಾಲತಾಣದಲ್ಲಿ ಪರಿಶೀಲಿಸಿದರೆ ನಿಯಮ ಉಲ್ಲಂಘನೆಯೇ ಆಗಿರುವುದಿಲ್ಲ. ಹೀಗಿದ್ದರು ಮಾಹಿತಿ ಕದ್ದು ಮೊಬೈಲ್ ಸಂಖ್ಯೆಗಳಿಗೆ ಎಪಿಕೆ ಲಿಂಕ್ ಕಳುಹಿಸುವ ಸ್ಕ್ಯಾಮ್ ಶುರುವಾಗಿದೆ. ಈ ಬಗ್ಗೆ ಲೇಖಕ ಮಧು ವೈ.ಎನ್. ಅವರು ತಮಗಾದ ಅನುಭವ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡು ಜಾಗೃತಿ ಮೂಡಿಸಿದ್ದಾರೆ. ಅವರ ಪೋಸ್ಟ್‌ನಲ್ಲಿನ ಮಾಹಿತಿ ಹೀಗಿದೆ.


ಅನೇಕರಿಗೆ ಎಪಿಕೆ ಸ್ಕ್ಯಾಮ್ ಸಂದೇಶ

ನೆಟ್ಟಿಗರೊಬ್ಬರು ‘ಸ್ಯಾಮ್‌ಸಂಗ್ ಮೊಬೈಲ್ ಬಳಸುತ್ತೇನೆ, ನನಗೂ ಎಪಿಕೆ ಸಂದೇಶ ಬಂದಿತ್ತು, ನಾನೆಲ್ಲಾದರೂ ಸಿಗ್ನಲ್ ಜಂಪ್ ಮಾಡಿದ್ದೀನಾ? ಏನಾಯ್ತ ಎಂದುಕೊಂಡು ಲಿಂಕ್ ಕ್ಲಿಕ್ ಮಾಡಿದ್ದೇ ಆಮೇಲೆ ಆಪ್ ಡೌನ್ಲೋಡ್ ಮಾಡಿ ಅಂತ ಬಂತು. ಅನುಮಾನ ಬಂದು ಹಸ್ಬೆಂಡ್ ಗೆ ತೋರಿಸಿದೆ, ಅದು ಎಪಿಕೆ ಫೈಲ್ ಓಪನ್ ಮಾಡಬಾರದು ಎಂದು ಗೊತ್ತಾಗಲ್ವಾ ಎಂದು ಬೈದರು. ನಂತರ ಬ್ಲಾಕ್ ಮಾಡಿ ಡಿಲಿಟಿ ಮಾಡಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ‘ಕೆ.ಆರ್. ಸರ್ಕಲ್ ನಲ್ಲಿ ನೀವು ಸೀಟ್ ಬೆಲ್ಟ್ ಹಾಕಿಲ್ಲ ಎಂಬ ಸಂದೇಶ ನನಗೂ ಬಂದಿತ್ತು. ದಿನಾಂಕ ಸಮೇತ ನನಗೆ ಸಂದೇಶ ಬಂದಿತ್ತು. ಆವತ್ತು ನಾನು ಅಲ್ಲಿ ಹೋಗಿದ್ದು ನಿಜ, ಆದರೆ ಸೀಟ್ ಬೆಲ್ಟ್ ಹಾಕಿದ್ದೆ. ಆಮೇಲೆ ಪರಿಶೀಲಿಸಿದಾಗ ನೋ ಚಲನ್ ಎಂದು ಬಂದಿದ್ದು’ ನೋಡಿದೆ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ‘ನಾವು ಸೃಷ್ಟಿಸಿದ ಟೆಕ್ನಾಲಜಿ ಮಾನ್ಸಟರುಗಳೇ ನಮ್ಮ ಬೆನ್ನತ್ತಿದ್ದಾರೆ!…ವಿಕ್ರಮಾದಿತ್ಯ ಬೇತಾಳದ ಕತೆಗಳು ಇದನ್ನೇ ಸೂಚಿಸಿದ್ದು’ ಎಂದು ಇನ್ನೊಬ್ಬರು ಕಾಮೆಂಟ್ ಹಾಕಿದ್ದಾರೆ. ಸೈಬರ್ ವಂಚಕರ ಬೆನ್ನು ಬೀಳುವ ಪೊಲೀಸರ ಹೆಸರಿನಲ್ಲಿ ಇಂತಹ ಸ್ಕ್ಯಾಮ್, ವಂಚನೆಗಳು ನಡೆಯುತ್ತವೆ. ಇದು ಕೇವಲ ವಾಹನ ಚಲನ್, ವಿಷ್, ಗಿಫ್ಟ್, ಬ್ಯಾಂಕ್ ಖಾತೆಗಳ ಕೆವೈಸಿ ಅಪ್ಡೇಟ್ ಹೆಸರಿನಲ್ಲಿ ಮಾತ್ರವಲ್ಲದೇ ಅನೇಕ ವಿಧಾನಗಳ ಮೂಲಕ ವಂಚನೆ ಯತ್ನ ನಡೆಯುತ್ತಲೇ ಇದ್ದು, ಸಾರ್ವಜನಿಕರು ಜಾಗೃತರಾಗಬೇಕಿದೆ.

  • Related Posts

    ನಾರಿ ಶಕ್ತಿ ವಂದನಾ ಅಧಿನಿಯಮ: ಇಂಡಿ ಒಕ್ಕೂಟದ ವಿರುದ್ಧ ಅನುರಾಗ್ ಸಿಂಗ್ ಠಾಕೂರ್ ವೀರೋಧ

    ಬೆಂಗಳೂರು: ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ‘ನಾರಿ ಶಕ್ತಿ ವಂದನಾ ಅಧಿನಿಯಮ’ವನ್ನು ಲೋಕಸಭೆಯಲ್ಲಿ ವಿರೋಧಿಸಿದ ಕಾಂಗ್ರೆಸ್ ನೇತೃತ್ವದ ಇಂಡಿ (I.N.D.I.A) ಒಕ್ಕೂಟದ ಧೋರಣೆಯನ್ನು ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಅನುರಾಗ್ ಸಿಂಗ್ ಠಾಕೂರ್ ಕಟುವಾಗಿ ಟೀಕಿಸಿದರು.…

    Continue reading
    ಮೈಸೂರು: ಅಂಬೇಡ್ಕರ್ ಜೀವನ ಚರಿತ್ರೆ ನಾಟಕ ಪ್ರದರ್ಶನ; ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ

    ಮೈಸೂರು: ನಗರದ ಗಾಂಧಿ ನಗರದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಮೈಸೂರು ರಾಜವಂಶಸ್ಥರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ…

    Continue reading

    Leave a Reply

    Your email address will not be published. Required fields are marked *