ಹನೂರು: “ಸಮಾಜದ ಪ್ರತಿಯೊಂದು ವರ್ಗದ ಏಳಿಗೆಯೇ ನಮ್ಮ ಗುರಿ. ವಿಶ್ವಕರ್ಮ ಸಮುದಾಯದ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಪೂರಕವಾಗುವಂತೆ ಬಂಡಳ್ಳಿ ಗ್ರಾಮದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ” ಎಂದು ಹನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಆರ್. ಮಂಜುನಾಥ್ ಅವರು ತಿಳಿಸಿದರು.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಶ್ರೀ ವಿಶ್ವಕರ್ಮ ಸಮಾಜದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನದ ಕಾಮಗಾರಿಗೆ ಶನಿವಾರ ಶಾಸಕರು ಅಧಿಕೃತವಾಗಿ ಭೂಮಿ ಪೂಜೆ ನೆರವೇರಿಸಿದರು.
ಸುಮಾರು 20 ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಈ ಭವನ ನಿರ್ಮಾಣವಾಗುತ್ತಿದ್ದು, ಶಾಸಕರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಈ ಭವನವು ಸ್ಥಳೀಯ ವಿಶ್ವಕರ್ಮ ಬಾಂಧವರ ಬಹುದಿನಗಳ ಬೇಡಿಕೆಯಾಗಿತ್ತು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರನ್ನು ವಾದ್ಯಗೋಷ್ಠಿ ಮತ್ತು ಮೇಳಗಳೊಂದಿಗೆ ಮೆರವಣಿಗೆಯ ಮೂಲಕ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಗ್ರಾಮಸ್ಥರು ಶಾಸಕರಿಗೆ ಹೂಮಳೆಗರೆದು ಅಭಿನಂದನೆ ಸಲ್ಲಿಸಿದರು.
ಈ ಸಂಭ್ರಮದ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು, ಬಿ.ಕೆ. ಶ್ರೀನಿವಾಸ್ ಮೂರ್ತಿ (ವಿಶ್ವಕರ್ಮ ಸಂಘಟನೆಯ ಜಿಲ್ಲಾ ನಾಮನಿರ್ದೇಶಿತ ಸದಸ್ಯರು, ಚಾಮರಾಜನಗರ), ಆನೇಕಲ್ ಶ್ರೀನಿವಾಸ್ (ವಿಶ್ವಕರ್ಮ ಸಮುದಾಯದ ರಾಜ್ಯಾಧ್ಯಕ್ಷರು), ಡಾ. ನಾಗಲಿಂಗಪ್ಪ, ರವಿ, ಶಾಂತಮ್ಮ, ವೀರಶೈವ ಶಂಕರಪ್ಪ, ಶಾಗ್ಯ ಬಾಬಣ್ಣ, ಸಮಿವುಳ್ಳಖಾನ್, ಜೇಸಿಮ್ ಪಾಷ, ನಾಗಯ್ಯ, ತಿರುಪತಿ, ಮಲ್ಲಪ್ಪ (ಪಿ.ಎ.ಸಿ.ಸಿ ಅಧ್ಯಕ್ಷರು), ಮಂಜೇಶ್ ಗೌಡ, ವಿಶ್ವ ಸಿದ್ದಚಾರ್, ಕಾರ್ಯಕ್ರಮದಲ್ಲಿ ಬಂಡಳ್ಳಿ ಗ್ರಾಮದ ನೂರಾರು ಗ್ರಾಮಸ್ಥರು ಹಾಗೂ ವಿಶ್ವಕರ್ಮ ಸಮಾಜದ ಬಂಧುಗಳು ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು. ಸಮುದಾಯದ ಪ್ರಮುಖರು ಶಾಸಕರ ಅಭಿವೃದ್ಧಿ ಪರ ಕಾಳಜಿಯನ್ನು ಶ್ಲಾಘಿಸಿ ಗೌರವಿಸಿದರು.







