ಚಾಮರಾಜನಗರ ಜಿಲ್ಲೆಯಲ್ಲೇ ಪ್ರಥಮ: ಗಾಣಿಗಮಂಗಲ ಗ್ರಾಮದಲ್ಲಿ ಸ್ಯಾಟಲೈಟ್ ನೆಟ್‌ವರ್ಕ್ ಕ್ರಾಂತಿ!
ಹನೂರು: ಆಧುನಿಕ ಯುಗದ ಅನಿವಾರ್ಯತೆಯಾಗಿರುವ ನೆಟ್‌ವರ್ಕ್ ಸೌಲಭ್ಯದಿಂದ ದಶಕಗಳಿಂದ ವಂಚಿತವಾಗಿದ್ದ ಹನೂರು ತಾಲ್ಲೂಕಿನ ಕಟ್ಟಕಡೆಯ ಗ್ರಾಮವಾದ ಗಾಣಿಗಮಂಗಲಕ್ಕೆ ಈಗ ಹೊಸ ತಂತ್ರಜ್ಞಾನದ ಸ್ಪರ್ಶ ಸಿಕ್ಕಿದೆ. ಜಿಲ್ಲೆಯಲ್ಲೇ ಮೊಟ್ಟ ಮೊದಲ ಬಾರಿಗೆ ಸ್ಯಾಟಲೈಟ್ (ಉಪಗ್ರಹ) ಮುಖಾಂತರ ಬಿಎಸ್‌ಎನ್‌ಎಲ್ (BSNL) ನೆಟ್‌ವರ್ಕ್ ಒದಗಿಸುವ ಐತಿಹಾಸಿಕ…

















