ನಂಜನಗೂಡು: ಶ್ರೀ ಶ್ರೀಕಂಠೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ಅದ್ಧೂರಿ ‘ಗರಳಪುರಿ ಉತ್ಸವ’; ಲೋಗೋ ಅನಾವರಣಗೊಳಿಸಿದ ಶಾಸಕ ದರ್ಶನ್ ಧ್ರುವನಾರಾಯಣ
ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ದೊಡ್ಡ ಜಾತ್ರೆ ಮಹೋತ್ಸವದ ಅಂಗವಾಗಿ, ಇದೇ ಮಾರ್ಚ್ 22 ರಿಂದ 29 ರವರೆಗೆ ಹಮ್ಮಿಕೊಳ್ಳಲಾಗಿರುವ ‘ಗರಳಪುರಿ ಉತ್ಸವ’ ಕಾರ್ಯಕ್ರಮದ ಲೋಗೋವನ್ನು ಶಾಸಕ ದರ್ಶನ್ ಧ್ರುವನಾರಾಯಣ ಅವರು ಇಂದು ಅನಾವರಣಗೊಳಿಸಿದರು.…

















