ಹೊಸ ವರ್ಷದ ಅಬ್ಬರಕ್ಕೆ ಸಜ್ಜಾದ ಕೊಡಗು

ಮಡಿಕೇರಿ : ದಕ್ಷಿಣ ಕಾಶ್ಮೀರ ಕೊಡಗು ಹೊಸ ವರ್ಷಾಚರಣೆಗೆ ಸಜ್ಜಾಗಿದೆ. ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಆಚರಣೆಗಾಗಿ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ನ್ಯೂ ಇಯರ್‌ ಸಂದರ್ಭದಲ್ಲಿ ಯಾವುದೇ ಅಕ್ರಮ, ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಇಲಾಖೆಯೂ ಕಟ್ಟೆಚ್ಚರ ವಹಿಸುತ್ತಿದೆ. ಪ್ರತಿಸಲದಂತೆ ಈ ಬಾರಿಯೂ ಹೊಸ ವರ್ಷದ ಸಂದರ್ಭ ಕೊಡಗಿನಲ್ಲಿ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿಆಗಮಿಸುವ ಸೂಚನೆಯಿದ್ದು, ಈಗಾಗಲೇ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಅಲ್ಲಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಹೋಟೆಲ್‌, ರೆಸಾರ್ಟ್‌, ಹೋಂಸ್ಟೇಗಳಲ್ಲಿ ನ್ಯೂ ಇಯರ್‌ ವಿಶೇಷ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದ್ದು, ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ.

ಹೋಟೆಲ್‌ ಬುಕ್ಕಿಂಗ್‌ ಫ್ಲಾಟ್‌ಫಾರಂಗಳು ಕ್ರಿಸ್‌ ಮಸ್‌ ಮತ್ತು ಹೊಸ ವರ್ಷದ ಆಚರಣೆಗಾಗಿ ನಾನಾ ಕೊಡುಗೆಗಳೊಂದಿಗೆ ಪ್ರವಾಸಿಗರನ್ನು ಜಿಲ್ಲೆಯತ್ತ ಸೆಳೆಯುತ್ತಿವೆ. ಇದರ ಫಲವಾಗಿ ಆ ದಿನಗಳಲ್ಲಿ ಕೊಡಗಿನ ಬಹುತೇಕ ಹೊಟೇಲ್‌, ಹೋಂಸ್ಟೇಗಳು ಈಗಾಗಲೇ ಭರ್ತಿಯಾಗಿದ್ದು, ಕಳೆದ ಸಲಕ್ಕಿಂತ ಈ ಬಾರಿ ಪ್ರೀ ಬುಕ್ಕಿಂಗ್‌ ಭರ್ಜರಿಯಾಗಿ ನಡೆದಿದೆ. ಕೊಠಡಿ ದರ ದುಪ್ಪಟ್ಟು: ಆನ್‌ಲೈನ್‌ ಮತ್ತು ಆಫ್‌ಲೈನ್‌ ಎರಡರಲ್ಲೂ ಕೊಡಗಿನ ರೂಮ್‌ ದರದಲ್ಲಿ ಭಾರೀ ಬದಲಾವಣೆಯಾಗಿದೆ.

ಬೇಡಿಕೆ ಹೆಚ್ಚಿರುವುದರಿಂದ ಬಹುತೇಕ ಹೋಟೆಲ್‌, ರೆಸಾರ್ಟ್‌ ಮತ್ತು ಹೋಂಸ್ಟೇಗಳ ಕೊಠಡಿ ದರ ಸಾಮಾನ್ಯಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಹೀಗಿದ್ದೂ ಪ್ರವಾಸಿಗರು ಮುಗಿಬಿದ್ದು ಕೊಠಡಿಗಳನ್ನು ಕಾಯ್ದಿರಿಸುತ್ತಿದ್ದಾರೆ. ಪ್ರಕೃತಿ ಮಡಿಲಲ್ಲಿಹೊಸ ವರ್ಷವನ್ನು ಬರಮಾಡಿಕೊಳ್ಳಲು ಕೊಡಗಿನತ್ತ ಮುಖ ಮಾಡಿರುವ ಪ್ರವಾಸಿಗರು ತಮ್ಮ ಬಜೆಟ್‌ನಲ್ಲಿರೂಮ್‌ ಹುಡುಕಾಡಿ ಬುಕ್ಕಿಂಗ್‌ ಮಾಡಿಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ ಮಡಿಕೇರಿ ನಗರದ ಬಹುತೇಕ ಕೊಠಡಿಗಳು ಡಿ.25 ಮತ್ತು ಡಿ.31ಕ್ಕೆ
ಈಗಾಗಲೇ ಸೋಲ್ಡ್‌ ಔಟ್‌ಆಗಿವೆ. ಕ್ರಿಸ್‌ಮಸ್‌ ದಿನದಿಂದ ಜನವರಿ 5, 6ರ ವರೆಗೂ ಇದೇ ಟ್ರೆಂಡ್‌ ಮುಂದುವರಿಯಲಿದೆ.

ಬಾರ್‌, ರೆಸ್ಟೋರಂಟ್‌ಗಳು ಎಂದಿನ ಸಮಯಕ್ಕೆ ಬಂದ್‌

ಹೊಸ ವರ್ಷಾಚರಣೆ ಹಿನ್ನೆಲೆ ಬೆಂಗಳೂರಿನಂತಹ ನಗರಗಳಲ್ಲಿಬಾರ್‌, ರೆಸ್ಟೋರಂಟ್‌ಗಳಿಗೆ ಹೆಚ್ಚಿನ ಸಮಯದವರೆಗೆ ತೆರೆಯಲು ಅವಕಾಶ ನೀಡಲಾಗುತ್ತದೆ. ಹೆಚ್ಚು ಪ್ರವಾಸಿಗರು ಆಗಮಿಸುವ ಹಿನ್ನೆಲೆ ಮಡಿಕೇರಿಯಲ್ಲಿಯೂ ಈ ಅವಕಾಶ ನೀಡಬೇಕು ಎಂಬುದು ಕೆಲ ಹೋಟೆಲ್‌, ರೆಸ್ಟೋರೆಂಟ್‌ ಮಾಲೀಕರ ಅಭಿಪ್ರಾಯವಾಗಿದೆ. ಆದರೆ ಸದ್ಯಕ್ಕೆ ಸರಕಾರದಿಂದ ಈ ಸಂಬಂಧ ಯಾವುದೇ ಮಾರ್ಗಸೂಚಿ ಬಂದಿಲ್ಲ. ಕೊಡಗಿನಲ್ಲಿಬಾರ್‌ಗಳ ಕ್ಲೋಸಿಂಗ್‌ ಅವ ಹೆಚ್ಚಿಸುವ ಸಾಧ್ಯತೆಯೂ ಇಲ್ಲ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ. ಹೋಟೆಲ್‌ ರೆಸ್ಟೋರೆಂಟ್‌ಗಳ ವಿಚಾರದಲ್ಲಿಯೂ ಯಾವುದೇ ಬದಲಾವಣೆ ಇರುವ ಸಾಧ್ಯತೆ ಕಡಿಮೆಯಿದ್ದು, ಎಂದಿನ ಸಮಯಕ್ಕೆ ಎಲ್ಲವೂ ಬಂದ್‌ ಆಗಲಿವೆ.

ಪಾರ್ಟಿ ಮಾಡಬಹುದು ತೊಂದರೆಯಾಗುವಂತಿಲ್ಲ!:

ಜಿಲ್ಲೆಯ ನಾನಾ ಹೋಂಸ್ಟೇ, ರೆಸಾರ್ಟ್‌ ಮತ್ತು ಹೊಟೇಲ್‌ಗಳಲ್ಲಿನ್ಯೂ ಇಯರ್‌ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ. ಇಂತಹ ಸ್ಥಳಗಳಲ್ಲಿಯೂ ರಾತ್ರಿ 10 ಗಂಟೆಯ ನಂತರ ಡಿ.ಜೆ ಬಳಕೆಗೆ ಅವಕಾಶವಿಲ್ಲ ಎಂದು ಪೊಲೀಸ್‌ ವರಿಷ್ಠಾಕಾರಿ ಕೆ.ರಾಮರಾಜನ್‌ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ. ಅವರವರ ಕೋಣೆಯ ಒಳಗೆ ಕೇಕ್‌ ಕತ್ತರಿಸುವುದು, ಪಾರ್ಟಿ ಮಾಡುವುದಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ.

ತೆರೆದ ಸ್ಥಳಗಳಲ್ಲಿ ಪಾರ್ಟಿ ನಡೆಸುವುದು ಅಕ್ಕ ಪಕ್ಕದವರಿಗೆ ಕಿರಿಕಿರಿ ಉಂಟಾಗುವುದು ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

  • Related Posts

    ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಇನ್ನು ಮುಂದೆ ಡಿಜಿಲಾಕರ್‌ನಲ್ಲೇ ಲಭ್ಯ ಅಂಕಪಟ್ಟಿ!

    ಬೆಂಗಳೂರು: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿಗೆ ಹೊಸ ಮುನ್ನುಡಿ ಬರೆದಿರುವ ಕರ್ನಾಟಕ ಸರ್ಕಾರ, ಈಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಸೌಲಭ್ಯವೊಂದನ್ನು ಜಾರಿಗೆ ತಂದಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ, ವಿದ್ಯಾರ್ಥಿಗಳು ತಮ್ಮ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಡಿಜಿಲಾಕರ್ (Digilocker)…

    Continue reading
    ಮಾರ್ಟಳ್ಳಿ: ಅರಣ್ಯ ಅಂಚಿನ ಗ್ರಾಮದಲ್ಲಿ ನೀರಿನ ಹಾಹಾಕಾರ; ಟ್ಯಾಂಕರ್ ನೀರಿಗಾಗಿ ಶಾಲಾ ಮಕ್ಕಳ ಹಕ್ಕೊತ್ತಾಯ

    ಹನೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಟು ಕೊವಿಲ್ ಭಾಗದ ನಿವಾಸಿಗಳು ಭೀಕರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಜನ ಮತ್ತು ಜಾನುವಾರುಗಳು ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿವೆ. ಅರಣ್ಯ ಸಮೀಪದ ಈ ಗ್ರಾಮದಲ್ಲಿ ನೀರಿನ…

    Continue reading

    Leave a Reply

    Your email address will not be published. Required fields are marked *