ಗಾಂಧಿ ಕುಟುಂಬದಲ್ಲಿ ದಶಕಗಳ ಬಳಿಕ ಮದುವೆ ಸಡಗರ; 28 ವರ್ಷಗಳ ನಂತರ ನೆರವೇರಲಿದೆ ಶುಭ ಕಾರ್ಯ!

ಹೌದು ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರ ಪುತ್ರ ರೆಹನ್ ವಾದ್ರಾ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು, ಸಿದ್ಧತೆಗಳು ಸಹ ಆರಂಭವಾಗಿವೆ. ಬಂದಿರುವ ಮಾಹಿತಿಯ ಪ್ರಕಾರ, ರೆಹನ್ ವಾದ್ರಾ ದೆಹಲಿಯ ಹುಡುಗಿಯೊಂದಿಗೆ ಏಳು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ರೆಹನ್ ವಾದ್ರಾ ಅವರ ಗೆಳತಿಯ ಹೆಸರು ಅವಿವಾ ಬೇಗಂ ಮತ್ತು ಅವರು ಏಳು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಕೊನೆಗೆ, ಅವರು ಮದುವೆಯಾಗಲು ನಿರ್ಧರಿಸಿದ್ದು, ಮೊದಲು ನಿಶ್ಚಿತಾರ್ಥ ನಡೆಯಲಿದೆ ಮತ್ತು ನಂತರ ವಿಶೇಷ ಜನರ ಸಮ್ಮುಖದಲ್ಲಿ ಮದುವೆ ನಡೆಯಲಿದೆ.

ಏಳು ವರ್ಷದ ಲವ್‌

ರೈಹಾನ್ ವಾದ್ರಾ ಅವರಿಗೆ 25 ವರ್ಷ. ಈಗ ಅವರು ಮದುವೆ ಆಗುತ್ತಿದ್ದಾರೆ. ಕಳೆದ ಏಳು ವರ್ಷಗಳ ಹಿಂದೆ ಈ ಜೋಡಿ ಪ್ರೀತಿ ಮಾಡುತ್ತಿದ್ದರು. ಅಂದರೆ 18ನೇ ವಯಸ್ಸಿಗೆ ಲವ್‌ನಲ್ಲಿ ಬಿದ್ದಿದ್ದರು. ಅವಿವ ಬೇಗ್ ಜೊತೆ ಇತ್ತೀಚೆಗೆ ಮದುವೆಯಾಗುವ ಪ್ರಸ್ತಾವನೆ ಇಟ್ಟಿದ್ದರು. ಈ ಮದುವೆಗೆ ಎರಡೂ ಕುಟುಂಬಸ್ಥರು ಕೂಡ ಒಪ್ಪಿಗೆ ಸೂಚಿಸಿದ್ದಾರೆ.

28 ವರ್ಷದ ಬಳಿಕ ಮದುವೆ

ಪ್ರಿಯಾಂಕಾ ಗಾಂಧಿ, ರಾಬರ್ಡ್‌ ವಾದ್ರಾ ಮದುವೆಯಾಗಿ 28 ವರ್ಷಗಳು ಕಳೆದಿವೆ. ಅಂದಹಾಗೆ ರಾಹುಲ್‌ ಗಾಂಧಿ ಅವರು 55 ವರ್ಷವಾದರೂ ಮದುವೆ ಆಗಿಲ್ಲ. ಈಗ ಇವರ ಅಳಿಯ ರೈಹಾನ್‌ ಮದುವೆ ಆಗುತ್ತಿದ್ದಾರೆ. ಅಂದಹಾಗೆ ರೈಹಾನ್‌-ಅವಿವ ಅವರ ಪ್ರೀತಿಯನ್ನು ಎರಡೂ ಕುಟುಂಬಗಳು ಒಪ್ಪಿವೆ. ಅವಿವ ಬೇಗ್ ಮತ್ತು ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದೆ, ಈಗಾಗಲೇ ಎರಡೂ ಕುಟುಂಬಗಳ ನಡುವೆ ಒಳ್ಳೆಯ ಬಾಂಧವ್ಯವಿದೆ ಎನ್ನಲಾಗಿದೆ.

  • Related Posts

    ನವದೆಹಲಿಯಲ್ಲಿ ಮಂಡ್ಯದ ರೈತರಿಗೆ ಹೆಚ್.ಡಿ. ಕುಮಾರಸ್ವಾಮಿ ಆತಿಥ್ಯ: ಕೃಷಿ ವಿಚಾರಗಳ ಬಗ್ಗೆ ಆತ್ಮೀಯ ಚರ್ಚೆ

    ನವದೆಹಲಿ: ಉತ್ತರ ಭಾರತ ಪ್ರವಾಸ ಕೈಗೊಂಡಿರುವ ಮಂಡ್ಯ ತಾಲೂಕಿನ ಮಂಗಳ ಗ್ರಾಮದ ರೈತ ಕುಟುಂಬಗಳಿಗೆ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ದೆಹಲಿ ನಿವಾಸದಲ್ಲಿ ಆತ್ಮೀಯ ಆತಿಥ್ಯ ನೀಡಿದರು.Contentsರೈತರೊಂದಿಗೆ ಸಂವಾದಸುಖಕರ ಪ್ರಯಾಣಕ್ಕೆ ಹಾರೈಕೆ ಮಂಗಳ ಗ್ರಾಮದ ಸುಮಾರು 48ಕ್ಕೂ ಹೆಚ್ಚು…

    Continue reading
    ತಮಿಳುನಾಡು ಚುನಾವಣೆ: ಊಟಿಯ ಟೀ ಎಸ್ಟೇಟ್‌ಗಳಲ್ಲಿ ಛಲವಾದಿ ನಾರಾಯಣಸ್ವಾಮಿ ಅವರಿಂದ ಬಿರುಸಿನ ಪ್ರಚಾರ

    ಊಟಿ (ತಮಿಳುನಾಡು): ತಮಿಳುನಾಡಿನ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ, ಕರ್ನಾಟಕದ ಹಿರಿಯ ನಾಯಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ ಅವರು ಇಂದು ಊಟಿಯ ವಿವಿಧ ಭಾಗಗಳಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚನೆ ನಡೆಸಿದರು.Contentsಪ್ರಚಾರದ ಪ್ರಮುಖ ವಿವರಗಳು:ಕಾರ್ಮಿಕರೊಂದಿಗೆ ಸಂವಾದ ಪ್ರಚಾರದ ಪ್ರಮುಖ…

    Continue reading

    Leave a Reply

    Your email address will not be published. Required fields are marked *