ಇಂದು ಎಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ, ಸಡಗರ ತುಂಬಿದ್ದು ಭಕ್ತರೆಲ್ಲ ಶ್ರೀವೆಂಕಟೇಶ್ವರನ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ತಿರುಪತಿಯಲ್ಲಂತೂ ಭಕ್ತ ಸಾಗರವೇ ನೆರೆದಿದ್ದು ಅಂತಹ ರಶ್‌ನಲ್ಲೂ ಕ್ಯಾಪ್ಟನ್ ಸೂರ್ಯಕುಮಾರ್ ದೇವರ ದರ್ಶನ ಪಡೆದುಕೊಂಡಿದ್ದಾರೆ.
ಟೀಮ್ ಇಂಡಿಯಾದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ತನ್ನ ಪತ್ನಿ ದೇವೀಶಾ ಶೆಟ್ಟಿಯೊಂದಿಗೆ ಇವತ್ತು ತಿರುಮಲ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ತಿಮ್ಮಪ್ಪನ ಸನ್ನಿದಿಗೆ ಕ್ಯಾಪ್ಟನ್ ತೆರಳಿದ್ದರು.
ಇನ್ನೇನು 1 ತಿಂಗಳ ಬಳಿಕ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಇದಕ್ಕೂ ಮೊದಲೇ ಯಶಸ್ಸಿಗಾಗಿ ತಿಮ್ಮಪ್ಪನ ಆಶೀರ್ವಾದವನ್ನ ಭಾರತ ತಂಡದ ನಾಯಕ ಪಡೆದುಕೊಂಡಿದ್ದಾರೆ. ಈಗಾಗಲೇ ವಿಶ್ವಕಪ್ ಆಟಗಾರರ ಹೆಸರನ್ನು ಬಿಸಿಸಿಐ ಅನೌನ್ಸ್ ಮಾಡಿದೆ.
ಆಂಧ್ರ ಪ್ರದೇಶದ ತಿರುಮಲದಲ್ಲಿರುವ ಶ್ರೀವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯುವ ವೇಳೆ ಸಾಕಷ್ಟು ಭಕ್ತರು ಆಗಮಿಸಿದ್ದರಿಂದ ರಶ್‌ನಲ್ಲಿ ಸೂರ್ಯಕುಮಾರ್ ಹಾಗೂ ಪತ್ನಿ ದೇವೀಶಾ ಶೆಟ್ಟಿ ಕೊಂಚ ತೊಂದರೆ ಅನುಭವಿಸಿದರು ಎಂದು ಹೇಳಬಹುದು.









