ನವದೆಹಲಿಯಲ್ಲಿ ಮಂಡ್ಯದ ರೈತರಿಗೆ ಹೆಚ್.ಡಿ. ಕುಮಾರಸ್ವಾಮಿ ಆತಿಥ್ಯ: ಕೃಷಿ ವಿಚಾರಗಳ ಬಗ್ಗೆ ಆತ್ಮೀಯ ಚರ್ಚೆ

ನವದೆಹಲಿ: ಉತ್ತರ ಭಾರತ ಪ್ರವಾಸ ಕೈಗೊಂಡಿರುವ ಮಂಡ್ಯ ತಾಲೂಕಿನ ಮಂಗಳ ಗ್ರಾಮದ ರೈತ ಕುಟುಂಬಗಳಿಗೆ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ದೆಹಲಿ ನಿವಾಸದಲ್ಲಿ ಆತ್ಮೀಯ ಆತಿಥ್ಯ ನೀಡಿದರು.

ಮಂಗಳ ಗ್ರಾಮದ ಸುಮಾರು 48ಕ್ಕೂ ಹೆಚ್ಚು ರೈತ ಕುಟುಂಬಗಳು ತೀರ್ಥಯಾತ್ರೆ ಹಾಗೂ ಪ್ರವಾಸದ ಅಂಗವಾಗಿ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.

ರೈತರೊಂದಿಗೆ ಸಂವಾದ

ತಮ್ಮನ್ನು ಭೇಟಿ ಮಾಡಲು ಬಂದ ರೈತರೊಂದಿಗೆ ಸಚಿವರು ಅತ್ಯಂತ ಆಪ್ತವಾಗಿ ಸಂವನ ನಡೆಸಿದರು. ಪ್ರವಾಸದ ಅನುಭವಗಳು, ಉತ್ತರ ಭಾರತದ ಹವಾಮಾನ ಮತ್ತು ಅಲ್ಲಿನ ಪ್ರದೇಶಗಳ ಬಗ್ಗೆ ರೈತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ವೇಳೆ ಮಂಡ್ಯ ಭಾಗದ ಕೃಷಿ ಚಟುವಟಿಕೆಗಳು, ಬೆಳೆಗಳ ಪರಿಸ್ಥಿತಿ ಮತ್ತು ರೈತರು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಸಚಿವರು ಮಾಹಿತಿ ಪಡೆದುಕೊಂಡರು.

ಸುಖಕರ ಪ್ರಯಾಣಕ್ಕೆ ಹಾರೈಕೆ

ರೈತರ ಭೇಟಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೆಚ್.ಡಿ. ಕುಮಾರಸ್ವಾಮಿ ಅವರು, “ನನ್ನ ಮಣ್ಣಿನ ರೈತರು ದೆಹಲಿಯ ನಿವಾಸಕ್ಕೆ ಆಗಮಿಸಿ ಪ್ರೀತಿಪೂರ್ವಕವಾಗಿ ಆತಿಥ್ಯ ಸ್ವೀಕರಿಸಿದ್ದು ನನಗೆ ಅಪಾರ ಸಂತಸ ತಂದಿದೆ. ಅವರು ತೋರಿದ ವಾತ್ಸಲ್ಯಪೂರ್ಣ ವಿಶ್ವಾಸಕ್ಕೆ ನಾನು ಸದಾ ಆಭಾರಿಯಾಗಿದ್ದೇನೆ. ಅವರ ಮುಂದಿನ ಪ್ರವಾಸ ಸುಖಕರವಾಗಿರಲಿ,” ಎಂದು ಹಾರೈಸಿದ್ದಾರೆ.

ಮಂಡ್ಯದ ರೈತರು ದೆಹಲಿಗೆ ಬಂದಾಗ ತಮ್ಮದೇ ಹಿರಿಯ ನಾಯಕನ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದು, ರೈತರಲ್ಲಿ ಹರ್ಷ ಮೂಡಿಸಿತ್ತು. ಔತಣದ ನಂತರ ಸಚಿವರು ರೈತ ಕುಟುಂಬಗಳೊಂದಿಗೆ ಫೋಟೋ ತೆಗೆಸಿಕೊಂಡು, ಪ್ರೀತಿಯಿಂದ ಬಿಳ್ಕೊಟ್ಟರು.

  • Related Posts

    ತಮಿಳುನಾಡು ಚುನಾವಣೆ: ಊಟಿಯ ಟೀ ಎಸ್ಟೇಟ್‌ಗಳಲ್ಲಿ ಛಲವಾದಿ ನಾರಾಯಣಸ್ವಾಮಿ ಅವರಿಂದ ಬಿರುಸಿನ ಪ್ರಚಾರ

    ಊಟಿ (ತಮಿಳುನಾಡು): ತಮಿಳುನಾಡಿನ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ, ಕರ್ನಾಟಕದ ಹಿರಿಯ ನಾಯಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ ಅವರು ಇಂದು ಊಟಿಯ ವಿವಿಧ ಭಾಗಗಳಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚನೆ ನಡೆಸಿದರು.Contentsಪ್ರಚಾರದ ಪ್ರಮುಖ ವಿವರಗಳು:ಕಾರ್ಮಿಕರೊಂದಿಗೆ ಸಂವಾದ ಪ್ರಚಾರದ ಪ್ರಮುಖ…

    Continue reading
    ಸಂಸತ್ ಆವರಣದಲ್ಲಿ 895ನೇ ಬಸವ ಜಯಂತಿ ಸಂಭ್ರಮ: ಬಸವಣ್ಣನವರ ಪ್ರತಿಮೆಗೆ ಗಣ್ಯರಿಂದ ಪುಷ್ಪ ನಮನ

    ನವದೆಹಲಿ: 12ನೇ ಶತಮಾನದ ವಿಶ್ವಗುರು, ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರರ 895ನೇ ಜಯಂತಿಯನ್ನು ಇಂದು ನವದೆಹಲಿಯ ಸಂಸತ್ ಭವನದ ಆವರಣದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಸಂಸತ್ ಆವರಣದಲ್ಲಿರುವ ಬಸವಣ್ಣನವರ ಪ್ರತಿಮೆಗೆ ಕೇಂದ್ರ ಸಚಿವರುಗಳು ಹಾಗೂ ಮಠಾಧೀಶರು ಪುಷ್ಪ ನಮನ ಸಲ್ಲಿಸಿದರು.Contentsಸಾಮಾಜಿಕ…

    Continue reading

    Leave a Reply

    Your email address will not be published. Required fields are marked *