ದೇವನಹಳ್ಳಿ ವಿಜಯಪುರ ದರ್ಗಾಕ್ಕೆ ಕೆ.ಹೆಚ್. ಮುನಿಯಪ್ಪ ಭೇಟಿ – ರಂಜಾನ್ ಶುಭಾಶಯ ವಿನಿಮಯ

ದೇವನಹಳ್ಳಿ: ಪವಿತ್ರ ರಂಜಾನ್ ಮಾಸದ ಅಂಗವಾಗಿ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ದರ್ಗಾಕ್ಕೆ ಭೇಟಿ ನೀಡಿ, ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು.

ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, “ರಂಜಾನ್ ಹಬ್ಬವು ಕೇವಲ ಒಂದು ಸಮುದಾಯದ ಹಬ್ಬವಲ್ಲ; ಇದು ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಮಹತ್ವದ ಸಂದೇಶವನ್ನು ಸಾರುವ ಪವಿತ್ರ ಕಾಲವಾಗಿದೆ. ನಾಡಿನಾದ್ಯಂತ ಈ ಸೌಹಾರ್ದತೆಯ ಬೆಳಕು ಪಸರಿಸಲಿ. ಎಲ್ಲರ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ನೆಲೆಸಲಿ,” ಎಂದು ಹಾರೈಸಿದರು.

ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ಸಚಿವರೊಂದಿಗೆ ಅನೇಕ ಪ್ರಮುಖ ಮುಖಂಡರು ಉಪಸ್ಥಿತರಿದ್ದರು, ರಾಜಣ್ಣ: ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಶಾಂತಕುಮಾರ್: ಬಯ್ಯಪ್ಪಾ ಅಧ್ಯಕ್ಷರು, ಮಂಜುನಾಥ್: ಬಯ್ಯಪ್ಪಾ ಸದಸ್ಯರು, ವೆಂಕಟೇಶ್: ವಿಜಯಪುರ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷರು, ಮುಬಾರಕ್ ಮತ್ತು ಸಮುದಾಯದ ಹಿರಿಯ ಮುಖಂಡರು,,

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

  • Related Posts

    ಮಾರ್ಟಳ್ಳಿ: ಅರಣ್ಯ ಅಂಚಿನ ಗ್ರಾಮದಲ್ಲಿ ನೀರಿನ ಹಾಹಾಕಾರ; ಟ್ಯಾಂಕರ್ ನೀರಿಗಾಗಿ ಶಾಲಾ ಮಕ್ಕಳ ಹಕ್ಕೊತ್ತಾಯ

    ಹನೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಟು ಕೊವಿಲ್ ಭಾಗದ ನಿವಾಸಿಗಳು ಭೀಕರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಜನ ಮತ್ತು ಜಾನುವಾರುಗಳು ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿವೆ. ಅರಣ್ಯ ಸಮೀಪದ ಈ ಗ್ರಾಮದಲ್ಲಿ ನೀರಿನ…

    Continue reading
    NH-44 ಕಾಮಗಾರಿಗಳ ಶೀಘ್ರ ಪೂರ್ಣಕ್ಕೆ ಸಂಸದ ಡಾ. ಸಿ.ಎನ್. ಮಂಜುನಾಥ್ ಸೂಚನೆ: ಹೈವೇ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ

    ಬೆಂಗಳೂರು: ಬೆಂಗಳೂರು–ಚಂದಾಪುರ–ಅತ್ತಿಬೆಲೆ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ಸಂಚಾರ ದಟ್ಟಣೆ ನಿವಾರಣೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.Contentsಪರಿಶೀಲನೆ ನಡೆಸಿದ ಪ್ರಮುಖ ಕಾಮಗಾರಿಗಳು:ಸಂಸದರ ಹೇಳಿಕೆ: ರಾಷ್ಟ್ರೀಯ ಹೆದ್ದಾರಿ…

    Continue reading

    Leave a Reply

    Your email address will not be published. Required fields are marked *