ನವದೆಹಲಿ: “ನೀರಿಲ್ಲದ ಜಗತ್ತು ಜೀವರಹಿತ. ಜಲ ಸಂರಕ್ಷಣೆ ಕೇವಲ ಸರ್ಕಾರಗಳ ಜವಾಬ್ದಾರಿಯಲ್ಲ, ಅದು ಸಮುದಾಯದ ಪ್ರತಿಯೊಬ್ಬರ ಕರ್ತವ್ಯವಾಗಿದೆ,” ಎಂದು ಕೇಂದ್ರ ಸಚಿವ ಶ್ರೀ ವಿ. ಸೋಮಣ್ಣ ಅವರು ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ‘ಜಲ ಮಹೋತ್ಸವ’ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಲ ಸಂರಕ್ಷಣೆ ಮತ್ತು ಸಂಗ್ರಹಣೆ: ಭವಿಷ್ಯದ ಪೀಳಿಗೆಗೆ ಶುದ್ಧ ಜಲವನ್ನು ಕಾಯ್ದಿರಿಸಲು ಜಲಮೂಲಗಳ ಸಂರಕ್ಷಣೆಗೆ ಒತ್ತು ನೀಡುವುದು.
ಜನರ ಭಾಗವಹಿಸುವಿಕೆ: ಜಲ ಜೀವನ್ ಮಿಷನ್‌ನ ಯಶಸ್ವಿ ಅನುಷ್ಠಾನಕ್ಕಾಗಿ ಗ್ರಾಮೀಣ ಭಾಗಗಳಲ್ಲಿ ಸುಸ್ಥಿರ ನೀರಿನ ನಿರ್ವಹಣೆಗೆ ಜನಸಾಮಾನ್ಯರನ್ನು ಪ್ರೇರೇಪಿಸುವುದು.
ಸಮುದಾಯದ ಜವಾಬ್ದಾರಿ: ಪ್ರತಿಯೊಬ್ಬ ನಾಗರಿಕನೂ ನೀರಿನ ಮಿತಬಳಕೆ ಮತ್ತು ಮರುಪೂರಣದ ಬಗ್ಗೆ ಜಾಗೃತಿ ಹೊಂದುವುದು.
“ಜಲ ಮಹೋತ್ಸವವು ನಮ್ಮ ಕರ್ತವ್ಯವನ್ನು ನೆನಪಿಸುವ ಮಹತ್ವದ ವೇದಿಕೆಯಾಗಿದೆ. ಭವಿಷ್ಯದ ಪೀಳಿಗೆಗೆ ನಾವು ನೀಡುವ ದೊಡ್ಡ ಕೊಡುಗೆ ಎಂದರೆ ಅದು ಶುದ್ಧ ನೀರು,” ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಅದ್ಧೂರಿ ಸಮಾರಂಭದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್, ಕೇಂದ್ರ ರಾಜ್ಯಖಾತೆ ಸಚಿವರಾದ ಶ್ರೀ ರಾಜ್ ಭೂಷಣ್ ಚೌದ್ರಿ, ಜಲಶಕ್ತಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಗಣ್ಯರು ಭಾಗವಹಿಸಿದ್ದರು.








