ರಾಜಕೀಯ ಅಂದ್ರೆ ಸಿನಿಮಾ ಸ್ಕ್ರಿಪ್ಟ್ ಅಲ್ಲ, ಇದು 24 ಗಂಟೆಯ ಸವಾಲು: ನಟ ವಿಜಯ್‌ಗೆ ಶ್ರೀಲಂಕಾ ಸಂಸದ ಕಿವಿಮಾತು!

ಚೆನ್ನೈ: ʻತಮಿಳು ನಟ ವಿಜಯ್ ಅವರು ರಾಜಕೀಯಕ್ಕೆ ಕಾಲಿಟ್ಟಿರುವುದು ಗಡಿಯಾಚೆ ಇರುವ ರಾಜಕೀಯ ನಾಯಕರಲ್ಲಿ ಆಸಕ್ತಿ ಮೂಡಿಸುವಂತೆ ಮಾಡಿದೆ. ರಾಜಕೀಯದಲ್ಲಿ ವಿಶ್ವಾಸಾರ್ಹತೆ ಎನ್ನುವುದು ಕೇವಲ ಮಾತಿನಿಂದ ಬರುವುದಿಲ್ಲ. ಅದು ಕೆಲಸದ ಮೂಲಕ ಸಾಬೀತಾಗಬೇಕು. ಅವರು ಸಂಪೂರ್ಣ ಸಮಯವನ್ನು ಅವರ ರಾಜಕೀಯ ಜೀವನದ ಮೇಲೆ ಶ್ರಮಿಸಬೇಕು ಎಂದು ಶ್ರೀಲಂಕಾದ ಸಂಸದ ನಮಲ್ ರಾಜಪಕ್ಸೆ ಸಲಹೆ ನೀಡಿದ್ದಾರೆ.

ನಟ ವಿಜಯ್‌ ಅವರು ರಾಜಕೀಯಕ್ಕೆ ಕಾಲಿಡುವುದು ನಿಶ್ಚಿತವಾಗಿದ್ದು 2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಅದ್ದೂರಿಯಾಗಿ ತಯಾರಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಅವರ ಕೊನೆಯ ಸಿನಿಮಾ ಜನನಾಯಗನ್‌ ಆಡಿಯೋ ಲಾಂಚ್‌ ವೇಳೆ ಕ್ಕಿಕ್ಕಿರಿದು ಜನ ಸೇರಿದ್ದರು. ಕರೂರಿನಲ್ಲಿ ಪ್ರಚಾರದ ವೇಳೆ ನಡೆದ ಕಾಲ್ತುಳಿತ ಪ್ರಕರಣದ ನಂತರ ವಿಜಯ್‌ ಅವರು ಕೊಂಚ ಬ್ರೇಕ್‌ ಕೊಟ್ಟುಕೊಂಡಿದ್ದರು. ಪ್ರಕರಣ ನಡೆದು ಎರಡು ತಿಂಗಳ ನಂತರ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿಯಾಗಿ, ಅವರೊಂದಿಗೆ ತಾವಿರುವುದಾಗಿ ಭರವಸೆ ತುಂಬಿದ್ದರು. ಜನನಾಯಗನ್‌ ಚಿತ್ರ ತಮಿಳರ ಪ್ರಖ್ಯಾತ ಹಬ್ಬ ಪೊಂಗಲ್‌ರಂದು ರಿಲೀಸ್‌ ಆಗುತ್ತಿರುವ ಹಿನ್ನೆಲೆ, ಆಡಿಯೋ ಲಾಂಚ್‌ಗಾಗಿ ಆಯೋಜಿಸಿದ್ದ ಬಹುದೊಡ್ಡ ಕಾರ್ಯಕ್ರಮದಿಂದ ಅವರು ಮತ್ತೆ ಸುದ್ದಿಯಲ್ಲಿದ್ದಾರೆ.

ರಾಜಕೀಯ ಪರೀಕ್ಷೆ ಎದುರಿಸಬೇಕಾಗಿದೆ

ʻವಿಜಯ್ ನನ್ನ ನೆಚ್ಚಿನ ನಟರಲ್ಲಿ ಒಬ್ಬರು. ನಟನಾಗಿ ಅವರ ಪ್ರತಿಭೆ ಅಪಾರ. ಜನಪ್ರಿಯತೆ ಬೃಹತ್‌ ಗಾತ್ರದ್ದು ಹೌದು. ಆದರೆ, ರಾಜಕೀಯ ಸಿನಿಮಾದಂತಲ್ಲ. ರಾಜಕಾರಣಿಯಾಗಿ ಅವರು ಇನ್ನೂ ಪರೀಕ್ಷೆ ಎದುರಿಸಬೇಕಿದೆ. ರಾಜಕೀಯವು ಸಿನಿಮಾದ ಸ್ಕ್ರಿಪ್ಟ್‌ನಂತೆ ಇರುವುದಿಲ್ಲ. ಇದು 24 ಗಂಟೆಗಳ ಜವಾಬ್ದಾರಿಯ ಕೆಲಸ. ಜನರು ನಿಮ್ಮ ಮೇಲೆ ನಿರೀಕ್ಷೆ ಇಟ್ಟಿರುತ್ತಾರೆ, ಆ ನಿರೀಕ್ಷೆಗಳನ್ನು ಪೂರೈಸಲು ಹಗಲು ರಾತ್ರಿ ಕೆಲಸ ಮಾಡುವುದು ಅಪಾರ ಮುಖ್ಯʼ ಎಂದು ಶ್ರೀಲಂಕಾದ ಸಂಸದ ನಮಲ್ ರಾಜಪಕ್ಸೆ ವಿಜಯ್‌ ಅವರಿಗೆ ಕಿವಿಮಾತು ಹೇಳಿರುವುದನ್ನು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ತಮಿಳುನಾಡಿನ ರಾಜಕಾರಣಿಗಳು ಮತ್ತು ವಿಜಯ್ ಅವರು ಶ್ರೀಲಂಕಾವನ್ನು ಕೇವಲ ಹಳೆಯ ರಾಜಕೀಯ ಸೂಕ್ಷ್ಮತೆಗಳ ದೃಷ್ಟಿಯಿಂದ ನೋಡುವುದನ್ನು ಬಿಡಬೇಕು. ಶ್ರೀಲಂಕಾ ಈಗ ಆರ್ಥಿಕ ಬಿಕ್ಕಟ್ಟು ಮತ್ತು ಯುದ್ಧದ ಕರಾಳ ನೆರಳಿನಿಂದ ಹೊರಬರುತ್ತಿದೆ. ತಮಿಳುನಾಡು ಮತ್ತು ಭಾರತದ ಪಾಲಿಗೆ ಶ್ರೀಲಂಕಾವನ್ನು ಒಂದು ಪ್ರಗತಿಪರ ಪಾಲುದಾರ ರಾಷ್ಟ್ರವಾಗಿ ನೋಡುವ ಕಾಲ ಬಂದಿದೆ ಎಂದರು. ಜನರ ಭರವಸೆ ಗಳಿಕೆ ಮುಖ್ಯ

ತಮಿಳುನಾಡು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಸಾಗುತ್ತಿದೆ. ಇಂತಹ ದೊಡ್ಡ ರಾಜ್ಯದ ಆಡಳಿತ ಅಥವಾ ಜವಾಬ್ದಾರಿ ಹೊರುವಾಗ ಪೂರ್ಣ ಸಮಯದ ಗಮನ ಅಗತ್ಯ. ನಟನೆ ಮತ್ತು ರಾಜಕೀಯವನ್ನು ಒಟ್ಟಿಗೆ ಕೊಂಡೊಯ್ಯುವುದು ಪ್ರಾಯೋಗಿಕವಾಗಿ ಕಷ್ಟಕರ. ರಾಜಕೀಯವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಿ. ನಿಮ್ಮ ಕ್ಷೇತ್ರದ ಜನರನ್ನು ಮತ್ತು ಅವರ ಸಮಸ್ಯೆಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳಿ. ಜನರಿಗೆ ನೀವು ಏನನ್ನು ನೀಡಲು ಸಾಧ್ಯವೋ ಅದನ್ನು ಮಾತ್ರ ಭರವಸೆ ನೀಡಿ ಮತ್ತು ಆ ಭರವಸೆಯನ್ನು ಮರೆಯದೆ ಈಡೇರಿಸಿ ಎಂದು ಸಲಹೆ ಕೊಟ್ಟರು.

ವಿಜಯ್ ಅವರು ಕಚ್ಚತೀವು ದ್ವೀಪದ ವಿಚಾರ ಮತ್ತು ಮೀನುಗಾರರ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ರಾಜಪಕ್ಸೆ, “ಕಚ್ಚತೀವು ವಿಚಾರದಲ್ಲಿ ರಾಜಕೀಯ ಅಭಿಯಾನಗಳ ಮಾತಿಗೂ ವಾಸ್ತವಕ್ಕೂ ವ್ಯತ್ಯಾಸವಿದೆ. ಕಚ್ಚತೀವು ದ್ವೀಪವು ಎರಡು ದೇಶಗಳ ನಡುವಿನ ಒಪ್ಪಂದದ ಭಾಗವಾಗಿದ್ದು, ಅದು ಶ್ರೀಲಂಕಾಕ್ಕೆ ಸೇರಿದ್ದಾಗಿದೆ ಎಂದರು.

  • Related Posts

    ನೇಮಮ್‌ನಲ್ಲಿ ಎನ್‌ಡಿಎ ಪರ ಅಲೆ: ರಾಜೀವ್ ಚಂದ್ರಶೇಖರ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ

    ತಿರುವನಂತಪುರಂ (ಕೇರಳ): ಕೇರಳದ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನೇಮಮ್‌ನಲ್ಲಿ ಎನ್‌ಡಿಎ ಪರವಾಗಿ ಜನಬೆಂಬಲದ ಅಲೆ ಎದ್ದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.Contentsರಾಜೀವ್ ಚಂದ್ರಶೇಖರ್ ಪರ ಭರ್ಜರಿ ಪ್ರಚಾರ:ಡಬಲ್ ಎಂಜಿನ್ ಸರ್ಕಾರದ ಆಶಯ:ಮತದಾರರ…

    Continue reading
    ಅನಂತ ಪದ್ಮನಾಭಸ್ವಾಮಿ ‘ಆರಟ್ಟು’ ಮಹೋತ್ಸವದಲ್ಲಿ ಶೋಭಾ ಕರಂದ್ಲಾಜೆ ಭಾಗಿ: ದೈವಿಕ ಕ್ಷಣಕ್ಕೆ ಸಾಕ್ಷಿಯಾದ ಕೇಂದ್ರ ಸಚಿವರು

    ತಿರುವನಂತಪುರ: ಕೇರಳದ ತಿರುವನಂತಪುರದಲ್ಲಿ ನಡೆಯುವ ವಿಶ್ವಪ್ರಸಿದ್ಧ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಐತಿಹಾಸಿಕ ‘ಆರಟ್ಟು’ ಮೆರವಣಿಗೆಯಲ್ಲಿ ಕೇಂದ್ರ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ ಅವರು ಇಂದು ಭಕ್ತಿಪೂರ್ವಕವಾಗಿ ಪಾಲ್ಗೊಂಡರು.Contentsರಾಜೀವ್ ಚಂದ್ರಶೇಖರ್ ಪರ ಭರ್ಜರಿ ಪ್ರಚಾರ:ಡಬಲ್ ಎಂಜಿನ್ ಸರ್ಕಾರದ ಆಶಯ:ಮತದಾರರ ಸ್ಪಂದನೆ: ವರ್ಷಕ್ಕೆ…

    Continue reading

    Leave a Reply

    Your email address will not be published. Required fields are marked *