ಡಿಕೆಶಿ ‘ನಟ್ಟು ಬೋಲ್ಟು’ ಹೇಳಿಕೆಗೆ ಕಿಚ್ಚ ಸುದೀಪ್ ಖಡಕ್ ಮಾತು: ಉದಾಹರಣೆ ಕೊಟ್ಟು ಕ್ಲಾಸ್!

ಬೆಂಗಳೂರು:
ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಿತ್ರರಂಗದ ಬಗ್ಗೆ ನೀಡಿದ್ದ “ನಟ್ಟು ಬೋಲ್ಟು ಟೈಟ್ ಮಾಡುವ” ಹೇಳಿಕೆಗೆ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಮೊದಲ ಬಾರಿಗೆ ಖಡಕ್ ಉತ್ತರ ನೀಡಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಸುದೀಪ್ ಮನಸ್ಸು ಬಿಚ್ಚಿ ಮಾತನಾಡಿದ್ದು, ಚಿತ್ರರಂಗದ ನೋವನ್ನು ಬಿಚ್ಚಿಟ್ಟಿದ್ದಾರೆ.

ಸುದೀಪ್ ಉತ್ತರದ ಮುಖ್ಯಾಂಶಗಳು:

ಉದಾಹರಣೆಯೊಂದಿಗೆ ಸ್ಪಷ್ಟನೆ

  • “ನಾವು ಓಡಾಡುವ ಕಾರಿನ ನಲ್ಟು ಬೋಲ್ಟು ಕೂಡ ಟೈಟ್ ಇರಬೇಕಾಗುತ್ತೆ. ಕಾರಿನ ನಲ್ಟು-ಬೋಲ್ಟು ವಿಚಾರ ಮೆಕ್ಯಾನಿಕ್‌ಗೆ ಮಾತ್ರ ಗೊತ್ತಿರುತ್ತದೆ.”
  • “ಹಾಗೆಯೇ, ಚಿತ್ರರಂಗದ ಕಷ್ಟ-ಸುಖ, ಸತ್ಯಾಸತ್ಯತೆಗಳು ಇಲ್ಲಿರುವ ನಮಗೆ ಮಾತ್ರ ತಿಳಿದಿರುತ್ತೆ. ಹೊರಗಿನಿಂದ ಮಾತನಾಡುವುದು ಸುಲಭ.”

ಡಿಕೆಶಿ ಬಗ್ಗೆ ಗೌರವ ಮತ್ತು ಅಸಮಾಧಾನ

  • “ನನಗೆ ಡಿಕೆಶಿಯವರ ಮೇಲೆ ಬಹಳ ಗೌರವ ಇದೆ. ಡಿಕೆಶಿಯವರು ಆ ಮಾತು ಹೇಳುವ ಮುಂಚೆ, ಚಿತ್ರರಂಗದ ಸತ್ಯವನ್ನು ಅರ್ಥ ಮಾಡಿಕೊಂಡು, ಸತ್ಯವನ್ನು ವಿಚಾರಿಸಕೊಂಡು ಮಾತಾಡಿದ್ರೆ ಅವರ ಮೇಲೆ ಇರುವ ಗೌರವ ಇನ್ನೂ ಹೆಚ್ಚಾಗುತ್ತಿತ್ತು.”
  • “ಡಿಕೆಶಿ ಮಾತಿನಿಂದ ಚಿತ್ರರಂಗದವರ ಮನಸ್ಸಿಗೆ ಬಹಳ ನೋವಾಗಿದೆ.”

ಚಿತ್ರರಂಗದ ಬಗ್ಗೆ ಸ್ಪಷ್ಟನೆ

  • “ಡಿಕೆಶಿ ಕರೆದ ಎಲ್ಲ ಕಾರ್ಯಕ್ರಮಕ್ಕೂ ನಾವು ಹೋಗಿದ್ದೇವೆ, ನಾವು ಅವರ ಜೊತೆ ನಿಂತಿದ್ದೇವೆ.”
  • “ಚಿತ್ರರಂಗದಲ್ಲಿ ತುಂಬಾ ಗೌರವಸ್ಥರು ಇದ್ದಾರೆ. ನಾವು ಯಾರೂ ಮೈ ಮಾರಿಕೊಂಡು ಬಾಳುವ ವ್ಯಕ್ತಿಗಳಲ್ಲ.”
  • “ನಾವು ಇರೋದೆ ಮನರಂಜನೆ ಕೊಡೋಕೆ, ನಮ್ಮ ಮನೇಲಿ ಸಾವು ಆದ್ರು ತಲೆಕೆಡಿಸಿಕೊಳ್ಳೋದೆ ನಾವು ಮನರಂಜನೆ ಕೊಡುತ್ತೇವೆ.”

ಈ ಹಿಂದೆ ಯಾಕೆ ಮಾತನಾಡಲಿಲ್ಲ?

  • “ಡಿಕೆಶಿ ಹೇಳಿಕೆಯಿಂದ ಚಿತ್ರರಂಗದವರಿಗೆ ತುಂಬಾ ಹರ್ಟ್ ಆಯ್ತು, ನಾವ್ಯಾಕೆ ಅದರ ಬಗ್ಗೆ ರಿಯಾಕ್ಟ್ ಮಾಡಿಲ್ಲ ಅಂದ್ರೆ ಅವರ ಮೇಲೆ ಇಟ್ಟಿರೋ ಗೌರವ ಅಷ್ಟೇ, ನಾನು ಮನಸ್ಸಿಗೆ ತುಂಬಾ ನೋವಾದಾಗ ರಿಯಾಕ್ಟ್ ಮಾಡಲ್ಲ.”

ಕಲಾವಿದರ ರಾಜಕೀಯ ಪ್ರವೇಶ ಬಗ್ಗೆ

  • “ಎಷ್ಟೋ ರಾಜ್ಯಗಳಲ್ಲಿ ಕಲಾವಿದರೂ ಸಿಎಂ ಆಗಿದ್ದಾರೆ, ಹಾಗಾಂತ ನಾನು ಸಿಎಂ ಆಗಬೇಕು ಆಗಬಾರದು ಅನ್ನೋದು ವಿಷ್ಯಾ ಅಲ್ಲ.”
  • “ಜನಗಳು ಪ್ರೀತಿ ವಿಶ್ವಾಸ ಇಟ್ಟಿರಲಿಲ್ಲ ಅಂದಿದ್ದರೆ ಕಲಾವಿದರು ಸಿಎಂ ಆಗ್ತಾ ಇರಲಿಲ್ಲ.”

ಶಿವರಾಜ್ ಕುಮಾರ್ ಬಗ್ಗೆ ಬೆಂಬಲ

  • “ಶಿವಣ್ಣನಂತಹ ಮೃದು ಸ್ವಭಾವದ, ಮಗುವಿನ ಮನಸ್ಸಿನ ವ್ಯಕ್ತಿಯನ್ನು ನಾನು ನೋಡಿಲ್ಲ. ಅವರಿಗೆ ಸಡನ್ನಾಗಿ ಪ್ರತಿಕ್ರಿಯಿಸಲು ಬರುವುದಿಲ್ಲ.”
  • “ಇತ್ತೀಚೆಗಷ್ಟೇ ದೊಡ್ಡ ಆರೋಗ್ಯ ಸಮಸ್ಯೆಯಿಂದ ಗೆದ್ದು ಬಂದಿದ್ದಾರೆ. ಅಂತಹವರನ್ನು ಟಾರ್ಗೆಟ್ ಮಾಡುವುದು ಎಷ್ಟು ಸರಿ? ಇಡೀ ಚಿತ್ರರಂಗ ಶಿವಣ್ಣನ ರಕ್ಷಣೆಗೆ ನಿಲ್ಲುತ್ತದೆ.”

ಕಮಲ್ ಹಾಸನ್ ಕಾಂಟ್ರವರ್ಸಿ ಬಗ್ಗೆ ಪ್ರತಿಕ್ರಿಯೆ

  • “ಕನ್ನಡ ಅಂತ ಬಂದಾಗ ಪ್ರತಿಯೊಬ್ಬರು ಕೆಲಸ ಮಾಡ್ತಾರೆ, ತಪ್ಪುಗಳು ಆಗುತ್ತೆ, ತಪ್ಪುಗಳು ಆದಾಗ ಯಾರ್ ಯಾರ್ ಮಾತಾಡಬೇಕು ಮಾತಾಡ್ತಾರೆ.”
  • “ದೊಡ್ಡ ರಾಜಕಾರಣಿಗಳು ಚಿತ್ರರಂಗದ ಬಗ್ಗೆ ಮಾತನಾಡುವಾಗ, ಆ ಬಗ್ಗೆ ಮಾತನಾಡಬೇಕಾದ ಸ್ಥಾನದಲ್ಲಿರುವ ಹಿರಿಯರೇ ಸುಮ್ಮನಿದ್ದಾಗ, ನನ್ನಂತಹ ಪುಟಾಣಿ ದೇಹ ಇಟ್ಟುಕೊಂಡು ಮಾತನಾಡುವುದು ತಪ್ಪಾಗುತ್ತದೆ.”

ಒಟ್ಟಿನಲ್ಲಿ ಕಿಚ್ಚ ಸುದೀಪ್ ಅವರ ಪ್ರತಿಕ್ರಿಯೆ ಯಾರಿಗೂ ನೋವಾಗದಂತೆ ಆದರೆ ಸ್ಪಷ್ಟವಾಗಿ ಚಿತ್ರರಂಗದ ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಲ್ಲಿದೆ. ಕನ್ನಡ ಚಿತ್ರರಂಗದ ಬೆಳವಣಿಗೆಯೇ ಎಲ್ಲರ ಆಶಯ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

  • Related Posts

    ಶಾಸಕ ಡಿ. ಸುಧಾಕರ್ ಆರೋಗ್ಯ ವಿಚಾರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್

    ಬೆಂಗಳೂರು: ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಇಂದು ಹೊಸೂರು ಮುಖ್ಯರಸ್ತೆಯ ಕೊನಪ್ಪನ ಅಗ್ರಹಾರದಲ್ಲಿರುವ ಕಿಮ್ಸ್ (KIMS) ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಹಿರಿಯೂರು ಶಾಸಕ ಶ್ರೀ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿಯನ್ನು…

    Continue reading
    ಮಳೆಗಾಲದ ಮುನ್ನೆಚ್ಚರಿಕೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪರಾಮರ್ಶೆ: ಪಶ್ಚಿಮ ವಲಯ ಆಯುಕ್ತರ ಕಟ್ಟುನಿಟ್ಟಿನ ಸೂಚನೆ

    ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ಅವರು ಇಂದು ಪಾಲಿಕೆಯ ಆಯವ್ಯಯ ಕ್ರಿಯಾಯೋಜನೆ ಹಾಗೂ ಮುಂಬರುವ ಮಳೆಗಾಲದ ಸಿದ್ಧತೆಗಳ ಕುರಿತು ಎಲ್ಲಾ ಇಲಾಖಾ ಮುಖ್ಯಸ್ಥರೊಂದಿಗೆ ಮಹತ್ವದ ಪರಾಮರ್ಶನಾ ಸಭೆ ನಡೆಸಿದರು.Contentsಸುದೀಪ್ ಉತ್ತರದ ಮುಖ್ಯಾಂಶಗಳು:ಉದಾಹರಣೆಯೊಂದಿಗೆ ಸ್ಪಷ್ಟನೆಡಿಕೆಶಿ ಬಗ್ಗೆ ಗೌರವ…

    Continue reading

    Leave a Reply

    Your email address will not be published. Required fields are marked *