ನಂಜನಗೂಡು: ತಾಲ್ಲೂಕಿನ ವೀರದೇವನಪುರ ಗ್ರಾಮದ ಜನತೆಗೆ ಪಡಿತರ ಸೌಲಭ್ಯವನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಹೊಸದಾಗಿ ಆರಂಭಿಸಲಾದ ನ್ಯಾಯಬೆಲೆ ಅಂಗಡಿಯನ್ನು ಶಾಸಕ ದರ್ಶನ್ ಧ್ರುವನಾರಾಯಣ ಅವರು ಇಂದು ಉದ್ಘಾಟಿಸಿದರು.
ಗ್ರಾಮಸ್ಥರ ದೈನಂದಿನ ಅಗತ್ಯಗಳನ್ನು ಪೂರೈಸುವಲ್ಲಿ ಈ ಕೇಂದ್ರವು ಪ್ರಮುಖ ಪಾತ್ರ ವಹಿಸಲಿದೆ ಎಂದು ಆಶಿಸಿದ ಶಾಸಕರು, ಪಾರದರ್ಶಕವಾಗಿ ಪಡಿತರ ವಿತರಣೆ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಮುಖರು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು:
ಸಹಕಾರ ಸಂಘದ ಪದಾಧಿಕಾರಿಗಳು: ಅಧ್ಯಕ್ಷರಾದ ವಿಜಯ್ ಕುಮಾರ್, ಮುದ್ದು ಮಾದ ಶೆಟ್ಟಿ, ಶ್ರೀನಿವಾಸ್ ಮೂರ್ತಿ, ದೊರೆಸ್ವಾಮಿ, ಮಂಜುನಾಥ್, ಸಿದ್ದಲಿಂಗು, ಪಾರ್ವತಿ, ಮಹೇಶ್, ಸೌಭಾಗ್ಯ ಹಾಗೂ ಗುರುಸಿದ್ದ ಅವರು ಉಪಸ್ಥಿತರಿದ್ದರು.
ಸ್ಥಳೀಯ ಮುಖಂಡರು: ರಂಗದಾಸಿ, ಸೋಮು, ಸುರೇಶ್, ಶಿವಸ್ವಾಮಿ, ಸುಕುಮಾರ್ ಹಾಗೂ ಮತ್ತಿತರ ಪ್ರಮುಖರು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹರ್ಷ ವ್ಯಕ್ತಪಡಿಸಿದರು.







