ರಾಜ್ಯದ 4,000 ದೇವಸ್ಥಾನಗಳ ದಾಖಲೆ ನಾಪತ್ತೆ: ಒತ್ತುವರಿ ತೆರವು ಹಾಗೂ ಅಭಿವೃದ್ಧಿಗೆ ‘ಭೂ ವರಾಹ’ ಯೋಜನೆ ಜಾರಿ

ಬೆಂಗಳೂರು: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ಆಸ್ತಿ ರಕ್ಷಣೆ, ಒತ್ತುವರಿ ತೆರವು ಮತ್ತು ಸಮಗ್ರ ಅಭಿವೃದ್ಧಿಯ ಕುರಿತು ಹಮ್ಮಿಕೊಳ್ಳಲಾಗಿದ್ದ ‘ವಿಜನ್ ಗ್ರುಪ್’ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಮುಜುರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ದೇವಾಲಯಗಳ ಆಸ್ತಿ ಸಂರಕ್ಷಣೆಗೆ ಕ್ರಾಂತಿಕಾರಿ ಕ್ರಮಗಳನ್ನು ಘೋಷಿಸಲಾಯಿತು.

ಸಭೆಯ ಪ್ರಮುಖ ನಿರ್ಧಾರಗಳು ಮತ್ತು ಚರ್ಚಿತ ವಿಷಯಗಳು:

1. ಆಸ್ತಿ ರಕ್ಷಣೆ ಮತ್ತು ‘ಭೂ ವರಾಹ’ ಯೋಜನೆ: ರಾಜ್ಯದಲ್ಲಿ ಸುಮಾರು 4,000 ದೇವಸ್ಥಾನಗಳ ದಾಖಲೆಗಳು ಲಭ್ಯವಿಲ್ಲದಿರುವುದು ಸಭೆಯಲ್ಲಿ ಆತಂಕ ಮೂಡಿಸಿತು. ಅನೇಕ ದೇವಾಲಯಗಳ ಆಸ್ತಿ ಒತ್ತುವರಿಯಾಗಿದ್ದು, ಇವುಗಳನ್ನು ತೆರವುಗೊಳಿಸಲು ವಿಶೇಷ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ’ಭೂ ವರಾಹ’ ಯೋಜನೆಯಡಿ ಇನ್ನು ಮುಂದೆ ಎಲ್ಲಾ ದೇವಸ್ಥಾನಗಳ ಆಸ್ತಿಯನ್ನು ಸಂರಕ್ಷಿಸಲು ನಿರ್ಧರಿಸಲಾಯಿತು.

2. ತಂತ್ರಜ್ಞಾನದ ಬಳಕೆ – ‘ರೋವರ’ ಯಂತ್ರ: ಸರ್ವೇ ಇಲಾಖೆಯ ಸಹಕಾರದೊಂದಿಗೆ ‘ರೋವರ’ ಎಂಬ ನೂತನ ತಂತ್ರಜ್ಞಾನದ ಯಂತ್ರಗಳನ್ನು ಬಳಸಿ ದೇವಾಲಯಗಳ ಜಿಯೋ ಮ್ಯಾಪಿಂಗ್ ಮಾಡಲು ಮತ್ತು ಗಡಿಗಳನ್ನು ಗುರುತಿಸಲು ಟೆಂಡರ್ ಕರೆಯಲು ತೀರ್ಮಾನಿಸಲಾಯಿತು.

3. ಪೋಡಿ ಪ್ರಕರಣಗಳ ಇತ್ಯರ್ಥ ಮತ್ತು ಇಂಡೀಕರಣ:

ದಾಖಲೆ ಮಟ್ಟದ ಸಾಧನೆ: 2018-2025ರ ಅವಧಿಯಲ್ಲಿ ಕೇವಲ 8,500 ಪೋಡಿ ಪ್ರಕರಣಗಳು ವಿಲೇವಾರಿಯಾಗಿದ್ದರೆ, 2023-2026ರ ಅವಧಿಯಲ್ಲಿ ಬರೋಬ್ಬರಿ 1.45 ಲಕ್ಷ ಪೋಡಿಗಳನ್ನು ಇತ್ಯರ್ಥಪಡಿಸಲಾಗಿದೆ.

2023ರಿಂದ ಈವರೆಗೆ 14,000 ದೇವಾಲಯಗಳ ಇಂಡೀಕರಣ ಪ್ರಕ್ರಿಯೆ ಪೂರ್ಣಗೊಂಡಿದೆ.

4. ದೇವಾಲಯಗಳ ಪುನರ್ ವರ್ಗೀಕರಣ: 2003ರಲ್ಲಿ ದೇವಾಲಯಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಲಾಗಿತ್ತು. ಕಳೆದ 23 ವರ್ಷಗಳಲ್ಲಿ ಆದಾಯ ಮತ್ತು ಪರಿಸ್ಥಿತಿ ಬದಲಾಗಿರುವುದರಿಂದ, ವೈಜ್ಞಾನಿಕವಾಗಿ ಪುನಃ ವರ್ಗೀಕರಣ ಮಾಡುವುದು ಅವಶ್ಯಕ ಎಂದು ಸಭೆ ಅಭಿಪ್ರಾಯಪಟ್ಟಿತು.

5. ಆದಾಯ ವೃದ್ಧಿ ಮತ್ತು ದತ್ತು ಯೋಜನೆ:

ಮೇಲುಕೋಟೆ ದೇವಸ್ಥಾನ: ಮೇಲುಕೋಟೆಯ 100 ಎಕರೆ ಆಸ್ತಿಯಿಂದ ಬರುತ್ತಿರುವ ಕೇವಲ 70 ಸಾವಿರ ರೂ. ಆದಾಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.

ಸಿ-ವರ್ಗ ಅಭಿವೃದ್ಧಿ: ಹಾಸನ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ‘ಸಿ’ ವರ್ಗದ ದೇವಾಲಯಗಳನ್ನು ಸ್ಥಳೀಯ ಕಂಪನಿಗಳ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲು ಅಥವಾ ದತ್ತು ನೀಡಲು ಯೋಜಿಸಲಾಗಿದೆ.

ಅನಿವಾಸಿ ಭಾರತೀಯರಿಗೆ ಕರೆ: ಅನಿವಾಸಿ ಭಾರತೀಯರು (NRI) ಮತ್ತು ಸಮಾಜದ ಉನ್ನತ ಸ್ಥಾನದಲ್ಲಿರುವವರು ತಮ್ಮ ಹುಟ್ಟೂರಿನ ಅಥವಾ ಮೂಲ ದೇವಸ್ಥಾನಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಪ್ರೋತ್ಸಾಹ ನೀಡಲಾಗುವುದು.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ, ಧಾರ್ಮಿಕ ದತ್ತಿ ಆಯುಕ್ತ ಶರತ್, ವಿಜನ್ ಗ್ರುಪ್ ಸದಸ್ಯರಾದ ಮಾಜಿ ಸಚಿವ ರಮಾನಾಥ ರೈ, ಮಾಜಿ ಸಂಸದ ಕೆ.ಸಿ. ರಾಮಮೂರ್ತಿ, ಪ್ರೊ. ರಾಧಾಕೃಷ್ಣ, ಡಾ. ಮಹಾಂತೇಶ ಬಿರಾದಾರ ಹಾಗೂ ಡಾ. ಶ್ರೀಪಾದ್ ಉಪಸ್ಥಿತರಿದ್ದರು.

  • Related Posts

    ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರವಹಿಸಿ: ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ಸೂಚನೆ

    ಕಲಬುರಗಿ: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮುಂಬರುವ ಎರಡು ತಿಂಗಳುಗಳಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.Contentsನೀರಿನ ಸರಬರಾಜಿಗೆ ಆದ್ಯತೆಜೆಜೆಎಂ…

    Continue reading
    ಕುಟುಂಬ ಸಮೇತ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

    ಮೈಸೂರು: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.Contentsನೀರಿನ ಸರಬರಾಜಿಗೆ ಆದ್ಯತೆಜೆಜೆಎಂ ಕಾಮಗಾರಿ ಹಾಗೂ ವಿದ್ಯುತ್ ಸಂಪರ್ಕಸ್ವಚ್ಛತೆ…

    Continue reading

    Leave a Reply

    Your email address will not be published. Required fields are marked *