ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಹಗಲಿರುಳು ಶ್ರಮಿಸುತ್ತಾ ನಗರದ ಸ್ವಚ್ಛತೆಯನ್ನು ಕಾಪಾಡುತ್ತಿರುವ ಪೌರಕಾರ್ಮಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ, ಮಾಜಿ ಸಚಿವರು ಹಾಗೂ ಹಿರಿಯ ನಾಯಕರಾದ ಆರ್. ಅಶೋಕ್ ಅವರು ಇಂದು ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಆದೇಶದ ಪ್ರತಿಗಳನ್ನು ವಿತರಿಸಿದರು.
ಶ್ರಮಿಕ ವರ್ಗಕ್ಕೆ ಸಾಮಾಜಿಕ ಭದ್ರತೆ
ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಶ್ರೀ ಆರ್. ಅಶೋಕ್ ಅವರು, “ನಗರವನ್ನು ಸುಂದರವಾಗಿ ಇಡುವಲ್ಲಿ ಪೌರಕಾರ್ಮಿಕರ ಪಾತ್ರ ಬಹಳ ದೊಡ್ಡದು. ಅವರ ಸೇವೆಗೆ ತಕ್ಕ ಗೌರವ ಮತ್ತು ಭದ್ರತೆ ಸಿಗಬೇಕೆಂಬ ಉದ್ದೇಶದಿಂದ ಇಂದು ಅವರಿಗೆ ಖಾಯಂ ನೇಮಕಾತಿ ಆದೇಶಗಳನ್ನು ನೀಡಲಾಗಿದೆ. ಇದು ಅವರ ಜೀವನಕ್ಕೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲಿದೆ” ಎಂದು ತಿಳಿಸಿದರು.
ಖಾಯಂ ನೇಮಕಾತಿ ಆದೇಶ ಪಡೆದ ಪೌರಕಾರ್ಮಿಕರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿ ಸಂಭ್ರಮಿಸಿದರು.
ಈ ಮಹತ್ವದ ಸಂದರ್ಭದಲ್ಲಿ ಆರ್. ಅಶೋಕ್ ಅವರಿಗೆ ಸಾಥ್ ನೀಡಿದ ಪ್ರಮುಖ ಮುಖಂಡರು, ಲಕ್ಷ್ಮೀಕಾಂತ್: ಮಂಡಲ ಅಧ್ಯಕ್ಷರು. ಎ.ಹೆಚ್. ಬಸವರಾಜ್: ಮಾಜಿ ಬಿಬಿಎಂಪಿ ಸದಸ್ಯರು. ವೆಂಕಟಸ್ವಾಮಿ ನಾಯ್ಡು: ಮಾಜಿ ಬಿಬಿಎಂಪಿ ಸದಸ್ಯರು. ಕಬ್ಬಾಳ್ ಉಮೇಶ್: ಪ್ರಮುಖ ಮುಖಂಡರು. ವೆಂಕಟೇಶ್ (ಕದಿರೇನಹಳ್ಳಿ): ಮುಖಂಡರು. ಉಪಸ್ಥಿತರಿದ್ದ ಗಣ್ಯರು







