ಬೆಂಗಳೂರು: ಯಲಹಂಕದ ಹೊಯ್ಸಳ ಕ್ರೀಡಾಂಗಣದಲ್ಲಿ ಇಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ನಗರ ಜಿಲ್ಲಾ ಘಟಕ ಮತ್ತು ಯುವ ಘಟಕದ ವತಿಯಿಂದ ಎರಡನೇ ಬಾರಿಗೆ ಆಯೋಜಿಸಲಾಗಿರುವ ‘ಶ್ರೀ ಬಸವೇಶ್ವರ ಕಪ್’ ಕ್ರಿಕೆಟ್ ಪಂದ್ಯಾವಳಿಗೆ ಅದ್ಧೂರಿ ಚಾಲನೆ ನೀಡಲಾಯಿತು.
ಯುವ ಮುಖಂಡರಾದ ಡಾ. ಅರುಣ್ ಸೋಮಣ್ಣ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿ, ಬ್ಯಾಟ್ ಬೀಸುವ ಮೂಲಕ ಕ್ರೀಡಾಪಟುಗಳಲ್ಲಿ ಉತ್ಸಾಹ ತುಂಬಿದರು.
ಕ್ರೀಡಾ ಚೈತನ್ಯ ಮತ್ತು ಸೌಹಾರ್ದತೆ
ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಡಾ. ಅರುಣ್ ಸೋಮಣ್ಣ ಅವರು, “ಕ್ರೀಡೆಗಳು ಯುವಜನತೆಯಲ್ಲಿ ಶಿಸ್ತು ಮತ್ತು ಸಂಘಟನಾ ಶಕ್ತಿಯನ್ನು ಬೆಳೆಸುತ್ತವೆ. ಬಸವಣ್ಣನವರ ಹೆಸರಿನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟವು ಸಮುದಾಯದ ಯುವಕರನ್ನು ಒಂದುಗೂಡಿಸುವ ಉತ್ತಮ ವೇದಿಕೆಯಾಗಿದೆ. ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಿ ಯಶಸ್ವಿಯಾಗಲಿ,” ಎಂದು ಹಾರೈಸಿದರು.
ಈ ಕ್ರೀಡಾ ಸಂಭ್ರಮದಲ್ಲಿ ಮಹಾಸಭಾದ ಪ್ರಮುಖ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು, ಲಿಂಗರಾಜು, ಪದಾಧಿಕಾರಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಬೆಂಗಳೂರು ನಗರ ಘಟಕ, ಮನೋಹರ್, ಅಧ್ಯಕ್ಷರು, ಯುವ ಘಟಕ, ಪುಟ್ಟರಾಜು, ಮಾಜಿ ಉಪ ಮೇಯರ್, ಬೆಂಗಳೂರು, ಶ್ರೀಮತಿ ಹೇಮಲತಾ, ಅಧ್ಯಕ್ಷರು, ಯಲಹಂಕ ಘಟಕ. ಮತ್ತು ಮಹಾಸಭಾದ ವಿವಿಧ ವಿಭಾಗಗಳ ಪದಾಧಿಕಾರಿಗಳು ಹಾಗೂ ನೂರಾರು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.







