ಸ್ವಚ್ಛ ಮೈಸೂರು ರಸಪ್ರಶ್ನೆ: ಯುವ ಶಕ್ತಿಯಿಂದ ಸಮರ್ಥ ಮೈಸೂರಿನ ಸಂಕಲ್ಪ; ವಿಜೇತರ ಪಟ್ಟಿ ಪ್ರಕಟ

ಮೈಸೂರು: ‘ಸ್ವಚ್ಛ ಸರ್ವೇಕ್ಷಣ್ 2025-26’ರ ಭಾಗವಾಗಿ ಮೈಸೂರು ಮಹಾನಗರ ಪಾಲಿಕೆ ಹಾಗೂ ಎಕ್ಸೆಲ್ ಪಬ್ಲಿಕ್ ಶಾಲೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ‘ಸ್ವಚ್ಛ ಮೈಸೂರು ರಸಪ್ರಶ್ನೆ’ ಕಾರ್ಯಕ್ರಮವು ನಗರದ ಕಲಾಮಂದಿರದಲ್ಲಿ ಶನಿವಾರ (ಜ. 31) ಅತ್ಯಂತ ಯಶಸ್ವಿಯಾಗಿ ಜರುಗಿತು.

ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಯುವ ಪೀಳಿಗೆಯನ್ನು ಪ್ರೇರೇಪಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಮೈಸೂರಿನ ವಿವಿಧ ಶಾಲೆ ಮತ್ತು ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ವಿಜೇತ ವಿದ್ಯಾರ್ಥಿಗಳ ವಿವರ:

ಸ್ಪರ್ಧೆಯು ಶಾಲೆ ಮತ್ತು ಕಾಲೇಜು ಎಂಬ ಎರಡು ವಿಭಾಗಗಳಲ್ಲಿ ನಡೆದಿದ್ದು, ಜಯಶಾಲಿಯಾದವರು ವಿವರ ಹೀಗಿದೆ:

೧. ಶಾಲಾ ವಿಭಾಗ:

ಪ್ರಥಮ ಬಹುಮಾನ: ಜಾಹ್ನವಿ ಯಾದವ್. ಎ ಮತ್ತು ತಕ್ಷಯ್ ಎ ಎಸ್ (ಕರ್ನಾಟಕ ಪಬ್ಲಿಕ್ ಶಾಲೆ, ಕುವೆಂಪು ನಗರ).

ದ್ವಿತೀಯ ಬಹುಮಾನ: ಪ್ರಥಮ್ ವಿ ಮತ್ತು ವರ್ಣಿತ ಎಸ್ (ಬೇಡನ್ ಪೋವಲ್ ಶಾಲೆ).

ತೃತೀಯ ಬಹುಮಾನ: ದೈವಿಕ್ ಎ ಜಿ ಮತ್ತು ಚಿನ್ಮಯಿ ಎ ನಾಯಕ್ (ಆಚಾರ್ಯ ವಿದ್ಯಾ ಕುಲ).

೨. ಕಾಲೇಜು ವಿಭಾಗ:

ಪ್ರಥಮ ಬಹುಮಾನ: ಆದರ್ಶ್ ಎ ಎಸ್ ಮತ್ತು ಹಿಮಂತ್ ಪಿ (ಮಹಾರಾಜ ಕಾಲೇಜ್, ಮೈಸೂರು).

ದ್ವಿತೀಯ ಬಹುಮಾನ: ಸಹನಾ ಡಿ ಎಸ್ ಮತ್ತು ಹರ್ಷಿತ ಬಿ ಕೆ (ಜೆಎಸ್ಎಸ್ ಮಹಿಳಾ ಕಾಲೇಜು, ಸರಸ್ವತಿಪುರಂ).

ತೃತೀಯ ಬಹುಮಾನ: ಯಶ್ವಂತ್ ಜಿ ಎಂ ಮತ್ತು ಮಂಜುನಾಥ್ ಪೂಜಾರ್ (ತೋಟಗಾರಿಕೆ ಮಹಾವಿದ್ಯಾಲಯ, ಮೈಸೂರು).

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಿ.ಎನ್. ಮಂಜೇಗೌಡ ಅವರು ಮಾತನಾಡಿ, ಸ್ವಚ್ಛ ಮೈಸೂರು ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತಿ ಮುಖ್ಯವಾದುದು ಎಂದು ಶ್ಲಾಘಿಸಿದರು.

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಶೇಖ್ ತನ್ವೀರ್ ಆಸಿಫ್ ಅವರು ಮಾತನಾಡಿ, ರಸಪ್ರಶ್ನೆಯ ಮೂಲಕ ಸ್ವಚ್ಛತೆಯ ಜ್ಞಾನವನ್ನು ಪಸರಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.

ಶ್ರೀ ಮೃತ್ಯುಂಜಯ ಕೆ.ಎಸ್: ಪಾಲಿಕೆ ಆರೋಗ್ಯಾಧಿಕಾರಿಗಳು ಹಾಗೂ ಸ್ವಚ್ಛ ಭಾರತ್ ಮಿಷನ್ ನೋಡಲ್ ಅಧಿಕಾರಿ. ಮೀನಾಕ್ಷಿ ಎಸ್: ಸಹಾಯಕ ಕಾರ್ಯಪಾಲಕ ಅಭಿಯಂತರರು. ಸಭೆಯಲ್ಲಿ ವಲಯ ಆಯುಕ್ತರುಗಳು, ಪರಿಸರ ಇಂಜಿನಿಯರ್‌ಗಳು, ಸಮುದಾಯ ಸಂಘಟಕರು, ಆರೋಗ್ಯ ನಿರೀಕ್ಷಕರು ಸೇರಿದಂತೆ ಶಿಕ್ಷಕರು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

  • Related Posts

    ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರವಹಿಸಿ: ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ಸೂಚನೆ

    ಕಲಬುರಗಿ: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮುಂಬರುವ ಎರಡು ತಿಂಗಳುಗಳಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.Contentsನೀರಿನ ಸರಬರಾಜಿಗೆ ಆದ್ಯತೆಜೆಜೆಎಂ…

    Continue reading
    ಕುಟುಂಬ ಸಮೇತ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

    ಮೈಸೂರು: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.Contentsನೀರಿನ ಸರಬರಾಜಿಗೆ ಆದ್ಯತೆಜೆಜೆಎಂ ಕಾಮಗಾರಿ ಹಾಗೂ ವಿದ್ಯುತ್ ಸಂಪರ್ಕಸ್ವಚ್ಛತೆ…

    Continue reading

    Leave a Reply

    Your email address will not be published. Required fields are marked *