ಸವದತ್ತಿ: ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವವನ್ನು ಸವದತ್ತಿಯ ಸುಳ್ಳದ ಉಮಾಚಂದ್ರ ಮಂಗಲ ಕಾರ್ಯಾಲಯದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಎಂ.ಬಿ. ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಲಿಂಗರಾಜ ದೇಸಾಯಿಯವರ ಕೊಡುಗೆ ಸ್ಮರಿಸಿದ ಸಚಿವರು
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ಅವರು, “ತ್ಯಾಗ, ಸೇವೆ, ಶಿಕ್ಷಣ, ನೀರಾವರಿ ಮತ್ತು ಕೃಷಿ ಕ್ಷೇತ್ರಗಳಲ್ಲಿ ಲಿಂಗರಾಜ ದೇಸಾಯಿ ಅವರ ಕೊಡುಗೆ ಅನನ್ಯವಾದದ್ದು. ಪೂಜ್ಯ ಹಾನಗಲ್ಲ ಕುಮಾರ ಸ್ವಾಮಿಗಳೊಂದಿಗೆ ಸೇರಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯನ್ನು ಸ್ಥಾಪಿಸುವ ಮೂಲಕ ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಅವರು ಭದ್ರ ಬುನಾದಿ ಹಾಕಿದರು,” ಎಂದು ಭಕ್ತಿಯಿಂದ ಸ್ಮರಿಸಿದರು.
ಗ್ರಂಥ ಹಾಗೂ ದಿನದರ್ಶಿಕೆ ಬಿಡುಗಡೆ
ಇದೇ ಸಂದರ್ಭದಲ್ಲಿ ಸಿರಸಂಗಿ ಲಿಂಗರಾಜ ದೇಸಾಯಿ ಅವರ ಜೀವನ ಮತ್ತು ಸಾಧನೆಗಳನ್ನು ಒಳಗೊಂಡ ‘ಸಿರಸಂಗಿ ಸಂಸ್ಥಾನ: ಒಂದು ಅಧ್ಯಯನ’ ಎಂಬ ಮಹತ್ವದ ಸಂಶೋಧನಾ ಗ್ರಂಥ ಹಾಗೂ ವಿಶೇಷ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಪರಮಪೂಜ್ಯ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು: ಧಾರವಾಡ ಮುರುಗಾ ಮಠ, ಪರಮಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು: ನಾಗನೂರು ರುದ್ರಾಕ್ಷಿ ಮಠ, ಪರಮಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು: ಸವದತ್ತಿ ಮೂಲಿಮಠ, ಕಾರ್ಯಕ್ರಮವು ನಾಡಿನ ವಿವಿಧ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಶ್ರೀ ವಿಶ್ವಾಸ್ ವೈದ್ಯ, ಶ್ರೀ ಬಾಬಾ ಸಾಹೇಬ್ ಪಾಟೀಲ್, ಮತ್ತು ಶ್ರೀ ಎನ್.ಎಚ್. ಕೋನರೆಡ್ಡಿ ಅವರು ಪಾಲ್ಗೊಂಡಿದ್ದರು. ಇವರೊಂದಿಗೆ ಸಿರಸಂಗಿ ಲಿಂಗರಾಜರ ಅಭಿಮಾನಿ ಬಳಗ, ಸಮಾಜದ ಮುಖಂಡರು ಹಾಗೂ ನೂರಾರು ಸಮಾಜ ಬಾಂಧವರು ಜಯಂತ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.







