ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವೇಳೆ ಗುಂಡು ತಗುಲಿ ಮೃತಪಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಕುಟುಂಬಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ 25 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.
ಮೃತ ರಾಜಶೇಖರ್ ಮನೆಗೆ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ನಿಮ್ಮೊಂದಿಗೆ ಸರ್ಕಾರ ನಮ್ಮ ಶಾಸಕರು ಇದ್ದಾರೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಧೈರ್ಯ ತುಂಬಿದರು. ನಂತರ 25 ಲಕ್ಷ ರೂ. ಪರಿಹಾರ ನೀಡಿದರು.
ಬಳಿ ಮಾತನಾಡಿದಸಚಿವ ಜಮೀರ್ ಅಹ್ಮದ್ ಖಾನ್ ”ಮೊನ್ನೆ ದಿನ ಘಟನೆಯಲ್ಲಿ ರಾಜಶೇಖರ ನಿಧನ ಹೊಂದಿದ್ದಾರೆ. ಮನೆ ನೋಡಿ ಬೇಜಾರಾಗಿದೆ, ದೊಡ್ಡ ಮಗನಾಗಿ ಮನೆಗೆ ಆಸರೆಯಾಗಿದ್ದ.ತಂದೆ ಹೋಟೆಲ್ ಇಟ್ಟು ಕೊಂಡಿದ್ದರು.ನಾನು ಭರತ್, ಗಣೇಶ್ ಸೇರಿ ಸಹಾಯ ಮಾಡಿದ್ದೇವೆ ಎಂದರು.







