ಭರತ್ ರೆಡ್ಡಿ ಗೂಂಡಾಗಿರಿಗೆ ಹೆದರುವ ಪ್ರಶ್ನೆಯೇ ಇಲ್ಲ: ಬಿ. ಶ್ರೀರಾಮುಲು ಸವಾಲು

ಬಳ್ಳಾರಿ, ಜ. 3- ನಗರದಲ್ಲಿ ನಡೆದ ಪೈರಿಂಗ್ ನಲ್ಲಿ ಗುಂಡು ಹಾರಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಬಿಜೆಪಿ ಮುಖಂಡ, ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.

ನಗರದ ಜನಾರ್ದನರೆಡ್ಡಿ ಅವರ ನಿವಾಸದಲ್ಲಿ ಶಾಸಕ ಜನಾರ್ದನರೆಡ್ಡಿ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರಿಗೇ ಅವರೇ ಗುಂಡು ಹಾರಿಸಿ ನಮ್ಮ ಮೇಲೆ ನುಗ್ಗಲು ಬಂದಿದ್ದಾರೆ. ದೌರ್ಜನ್ಯ ಗೂಂಡಾಗಿರಿಗೆ ನಾವು ಹೆದರಲ್ಲ, ಹಾಲಿ ನ್ಯಾಯಾಧೀಶರಿಂದ, ಅಥವಾ ಸಿಬಿಐನಿಂದ ತನಿಖೆ ಆಗಲಿ ಎಂದು ಒತ್ತಾಯಿಸಿದರು.

26 ವರ್ಷದ ರಾಜಶೇಖರ ರೆಡ್ಡಿ ಕಾಂಗ್ರೆಸ್ ಯುವಕನ ಸಾವಿಗೆ ಪಕ್ಷದಿಂದ, ವಯಕ್ತಿಕವಾಗಿ ಶೋಕ ವ್ಯಕ್ತಪಡಿಸುವೆ. ಕ್ಷುಲ್ಲಕ ಕಾರಣದಿಂದ ಈ ಘಟನೆ ನಡೆಯಿತು. ಜರ್ನಾರ್ದನರೆಡ್ಡಿ ಅವರ ಮನೆಯ ರಸ್ತೆಗೆ ಅಡ್ಡಿಯಾಗಿ ಬ್ಯಾನರ್ ಕಟ್ಟಲು ಮುಂದಾಗಿದ್ದೇಕೆ, ಗಲಾಟೆ ಮಾಡಲೆಂದೆ ಪೂರ್ವ ನಿಯೋಜಿತವಾಗಿ ಅವರು ದಾಳಿ ನಡೆಸಿ ಗುಂಡು ಹಾರಿಸಿದರು. ಪೊಲೀಸರು ಬಂದು ಚದುರಿಸಿದರು. ಪರಸ್ಪರ ಘೋಷಣೆ ಕೂಗಲಾಯ್ತು. ಪೊಲೀಸ್ ಫೈರಿಂಗ್ ಆಯ್ತು ಗಾಳಿಯಲ್ಲಿ ಈ ವೇಳೆ ಸಿನಿಮಾದಂತೆ ಸತೀಶ್ ರೆಡ್ಡಿ ಗನ್ ಮ್ಯಾನ್ ಗಳು ಪೈರ್ ಮಾಡಿದರು. 0.76 ಬುಲೆಟ್ ದೊರೆತಿದೆ. ಇದರಿಂದ ಅವರಿಂದಲೇ ಮೇಲ್ನೋಟಕ್ಕೆ ಪೈರಿಂಗ್ ಆಗಿರುವುದು ಖಚಿತವಾಗುತ್ತೆ.

ಕಲ್ಲುತೂರಾಟದಿಂದ ಅನೇಕ ನಮ್ಮ ಬೆಂಬಲಿಗರು ಗಾಯಗೊಂಡರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಕಳಿಸಿದ್ದಾರೆ. ದಾಖಲು ಮಾಡಿಕೊಳ್ಳುತ್ತೆ, ಬಿಹಾರದ ರೀತಿ ಆ ಸತೀಶ್ ರೆಡ್ಡಿ ಎಂಟು ಜನ ಗನ್ ಮ್ಯಾನ್ ಗಳಿಂದ ಓಡಾಡುತ್ತ ಫೈರಿಂಗ್ ಮಾಡಿದ್ದಾರೆಂದು ಆರೋಪಿಸಿದರು.

ಮೃತ ವ್ಯಕ್ತಿಯ ದೇಹದಲ್ಲಿ ದೊರೆತ ಬುಲೆಟ್ ಯಾವುದೆಂದು ತನಿಖೆಯಾಗಲಿ ಎಂದ ಅವರು ಪೆಟ್ರೋಲ್ ಬಾಂಬ್ ಎಸೆಯಲು ಬಂದಿದ್ದರು. ಶಾಸಕ ಭರತ್ ರೆಡ್ಡಿ ಮನೆ ಸುಡುತ್ತೇನೆಂದು ಹೇಳಿದ್ದಾರೆ. ಅದಕ್ಕಾಗಿ ಅವರು ಪೂರ್ವ ನಿಯೋಜಿತರಾಗಿ ಬಂದಿದ್ದರಂತೆ ಕಾಣುತ್ತಿದೆ ಎಂದು ಆರೋಪಿಸಿದರು.

ನಮ್ಮ ಆಕ್ಷೇಪಣೆ ಇಲ್ಲ:

ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ನಮ್ಮ ಅಭ್ಯಂತರ ಇಲ್ಲ. ಅದು ಆಗಬೇಕೆಂಬುದು ನಮ್ಮ ಆಶಯವಾಗಿದೆ. ವಾಲ್ಮೀಕಿಯನ್ನು, ಜಾತಿಯನ್ನು ನೀವು ಬಳಸಿಕೊಳ್ಳಬೇಡಿ, ನಾವು ಸಹ ಸಮಾರಂಭಕ್ಕೆ ಸಹಾಯ ಮಾಡುತ್ತೇವೆ ಎಂದರು. ಅವರು ಸಂಸ್ಕಾರ ಇಲ್ಲದಂತೆ ನಡೆದುಕೊಳ್ಳುವುದು ಥರವಲ್ಲ. ಪ್ರಚೋದನೆ, ಶಕ್ತಿ ಪ್ರದರ್ಶನ ಬೇಡ. ನಮ್ಮಮನೆಗಳ ಕಡೆಗೆ ಬಂದು ಗಲಾಟೆ ಮಾಡಿದವರು ಯಾರು, ಯಾವುದೇ ತನಿಖೆ ಮಾಡಲಿ ಎಂದರು.

ನಾನು ತಪ್ಪು ಮಾಡಲ್ಲ, ಮಾಡಿಲ್ಲ. ನಮ್ಮನ್ನು ಪೊಲೀಸರು ರಕ್ಷಣೆ ಮಾಡಿದರು. ನಾನು ನಿರೀಕ್ಷಣಾ ಜಮೀನು ಪಡೆಯಲ್ಲ. ಜನಾರ್ದನರೆಡ್ಡಿಗೆ ತೊಂದರೆ ಮಾಡುವುದು ಭರತ್ ರೆಡ್ಡಿಯದ್ದಾಗಿದೆ ಎಂದು ದೂರಿದರು.

ಪುತ್ಥಳಿ ಅನಾವರಣಕ್ಕೆ ಇಷ್ಟೆಲ್ಲ ಮಾಡಬೇಕೆ, ರಾಮುಲು ವಾಲ್ಮಿಕಿ ಸಮುದಾಯಕ್ಕೆ ಏನು ಮಾಡಿದೆಂದು ಜನರಿಗೆ ಗೊತ್ತಿದೆ. ಅವರಲ್ಲಿ ವಿನಂತಿ ಇಷ್ಟೇ ನೀವು ರಾಜಕೀಯವಾಗಿ ಬೆಳೆಯಬೇಕು. ನಿಮ್ಮಲ್ಲಿ ಸ್ಪೀಡ್ ಬೇಡ, ಸ್ಪೀಡ್ ಹೆಚ್ಚಿದರೆ ಆಕ್ಸಿಡೆಂಟ್ ಆಗುತ್ತೆ ಎಂದು ಎಚ್ಚರಿಸಿದರು. ಘಟನೆ ಬಗ್ಗೆ ಪಕ್ಷದ ರಾಜ್ಯ , ರಾಷ್ಟ್ರೀಯ ನಾಯಕರಿಗೆ ಮಾಹಿತಿ ನೀಡಿರುವೆ ಎಂದರು.

ನಮ್ಮ ಮನೆಗಳ ಬಳಿ ಬಂದು ಗಲಾಟೆ ಮಾಡಿದ್ದಾರೆ. ಈ ಬಗ್ಗೆ ಜನಾರ್ದನರೆಡ್ಡಿ ಅವರು ಹತ್ಯೆ ಯತ್ನ, ಗೂಂಡಾಗಿರಿ ಬಗ್ಗೆ ಪ್ರಕರಣ ದಾಖಲು ಮಾಡಲಿದ್ದಾರೆ.

ಜೀವ ರಕ್ಷಣೆ ದೂರು ಜನಾರ್ದನರೆಡ್ಡಿ

ಮಾಜಿ ಸಚಿವ, ಗಂಗಾವತಿ ಶಾಸಕ ಜನಾರ್ದನರೆಡ್ಡಿ ನಿನ್ನೆ ಘಟನೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿ, ಶಾಸಕ ಭರತ್ ರೆಡ್ಡಿ ಬಗ್ಗೆ ಏಕವಚನದಲ್ಲಿ ಮಾತನಾಡಿ ನಾರಾ ಭರತ್ ರೆಡ್ಡಿ ಹೇಳಿಕೆ ಗಮನಿಸಿರುವೆ. ಆತ ತಾಳ್ಮೆಯಿಂದ ಇದ್ದಿದ್ದಾನಂತೆ ಇಲ್ಲದಿದ್ದರೆ ನಮ್ಮ ಮನೆ, ಬಳ್ಳಾರಿ ಸುಟ್ಟು ಭಸ್ಮ ಮಾಡುತ್ತಿದ್ದನಂತೆ. ಏನು ಓದಿದ್ದೀಗಿ ಎನ್ನುವುದು ಮುಖ್ಯ ಅಲ್ಲ, ಅವರ ನಡೆ ನುಡಿ ಸಂಸ್ಕೃತಿ ತೋರಿಸುತ್ತೆ.
ಭರತ್ ರೆಡ್ಡಿ ಓರ್ವ ಮೂರ್ಖ, ಅವನ ಸಂಸ್ಕೃತಿ ಏನೆಂದು ತೋರಿಸುತ್ತೆ. ಶಾಸಕನಾಗಿ ಡೆವಲಪ್ ನೆಂಟ್ ಮಾಡಲಿಲ್ಲ. ಕೆಎಂಇಅಸರ್ ಸಿ ಹಣ ಬಳಿಸಿಕೊಳ್ಲಲಿಲ್ಲ ಶಾಸಕನಾಗಿ ವಿಫಲನಾಗಿದ್ದಾನೆಂದರು.

ವಾಲ್ಮೀಕಿ ಪೂರ್ತಿ, ಭವನ ಈಗಾಗಲೇ ಇದ್ದರೂ, ಮತ್ತೊಂದು ವಾಲ್ಮೀಕಿ ಪ್ರತಿಮೆ ಮಾಡಲು ಹೋಗಿ ಗಲಾಟೆ ಮಾಡಲು ಮುಂದಾಗಿದ್ದಾರೆ. ಅಡ್ಡಾದಿಡ್ಡಿಯಾಗಿ ಹಣ ಮಾಡಲು ಭರತ್ ರೆಡ್ಡಿ ವಾರ್ಡ್ ವಾರ್ಡಿಗೆ ಎರೆಡು ಮಟಕಾ ಗುಂಪು ಮಾಡಿದ್ದಾರೆ. ಗಾಂಜಾ ಮಾರಾಟ ಮಾಡಿಸುತ್ತಿದ್ದಾರೆ. ಅಕ್ರಮ ಮರಳು ಸಾಗಾಣಿಕೆ, ಲೇಔಟ್ ಅಪ್ರೂಲ್ ಗೆ ೨೦ ಲಕ್ಷ ಲಂಚ ಕೊಡಬೇಕು. ಹೀಗೆ ಬಳ್ಳಾರಿಯನ್ನು ಹಾಳು ಮಾಡಿದ್ದಾರೆ. ನನ್ನನ್ನು ಎದುರಿಸಿದರೆ ನಗರವೆಲ್ಲ ಭಯಭೀತರಾಗಿ ತನ್ನ ವಸೂಲಿ ಹೆಚ್ಚಿಸಿಕೊಳ್ಳುವ ಪ್ರಯತ್ನ ಎಂದು ಜನಾರ್ದನರೆಡ್ಡಿ ಆರೋಪಿಸಿದರು.
ಖಾಸಗಿ ವ್ಯಕ್ತಿಯ ಗನ್ ಮ್ಯಾನ್ ಬುಲೆಟ್ ಎಂದು ಚಿತ್ರದುರ್ಗದ ಎಸ್ಪಿ ರಂಜಿತ್ ಕುಮಾರ್ ಬಳ್ಳಾರಿಯಲ್ಲಿ ಹೇಳಿದ್ದಾರೆ.

  • Related Posts

    ಮುಳ್ಳೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ: ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿ ಭಾಗಿ

    ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಪರಮಪೂಜ್ಯ ಬೋಧಿಸತ್ವ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಮಹೋತ್ಸವವನ್ನು ಅತ್ಯಂತ ಸಡಗರ ಮತ್ತು ಗೌರವಪೂರ್ವಕವಾಗಿ ಆಚರಿಸಲಾಯಿತು. ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಹಾಗೂ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ…

    Continue reading
    ಶಾಸಕ ಡಿ. ಸುಧಾಕರ್ ಆರೋಗ್ಯ ವಿಚಾರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್

    ಬೆಂಗಳೂರು: ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಇಂದು ಹೊಸೂರು ಮುಖ್ಯರಸ್ತೆಯ ಕೊನಪ್ಪನ ಅಗ್ರಹಾರದಲ್ಲಿರುವ ಕಿಮ್ಸ್ (KIMS) ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಹಿರಿಯೂರು ಶಾಸಕ ಶ್ರೀ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿಯನ್ನು…

    Continue reading

    Leave a Reply

    Your email address will not be published. Required fields are marked *