ಗಣಿನಾಡಿನಲ್ಲಿ ಗುಂಡಿನ ಸದ್ದು:  ಸಿದ್ದರಾಮಯ್ಯ ಸಿಟ್ಟು, ತಪ್ಪು ಮಾಡಿದವರ ವಿರುದ್ಧ ಕ್ರಮ ಎಂದ ಜಮೀರ್ ಅಹ್ಮದ್ ಖಾನ್

ಬೆಂಗಳೂರು: ಬಳ್ಳಾರಿ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸಿಟ್ಟು ಮಾಡಿಕೊಂಡಿದ್ದಾರೆ. ಸಣ್ಣದೊಂದು ಘಟನೆಯಾಗಿದೆ. ಇಷ್ಟೊಂದು ದೊಡ್ಡದು ಯಾಕಾಯ್ತು ಎಂದು ರೇಗಿದ್ದಾರೆ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಬಳ್ಳಾರಿ ಗಲಾಟೆ ಹಾಗೂ ಗುಂಡಿನ ದಾಳಿಯಲ್ಲಿ ನಡೆದ ಸಾವು ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು. ಹಾಗೂ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇಂತಹ ಘಟನೆ ಆಗಬಾರದಿತ್ತು, ಆದರೆ ಆಗಿದೆ. ಬ್ಯಾನರ್ ಕಟ್ಟುವ ವಿಚಾರಕ್ಕೆ ಆಗಿರೋದು ಎಲ್ಲರಿಗೂ ಗೊತ್ತಿದೆ. ಗುಂಡಿನ ದಾಳಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಪ್ರಾಣ ಕಳೆದುಕೊಂಡಿದ್ದಾನೆ. ಪೊಲೀಸರು ಘಟನೆ ಸಂಬಂಧ ತನಿಖೆ ಮಾಡ್ತಿದ್ದಾರೆ ಎಂದು ವಿವರಿಸಿದರು.

ಯಾರು ತಪ್ಪು ಮಾಡಿದ್ದಾರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ರಾತ್ರಿ ಒಂದು ಘಂಟೆಗೆ ಪರಿಸ್ಥಿತಿ ತಹಬದಿಗೆ ಬಂದಿದೆ. ನಾನು ಡಿಜಿಪಿ, ಗುಪ್ತಚರ ಇಲಾಖೆಯ ಐಜಿ ಜೊತೆಗೆ ಮಾತನಾಡಿ, ಸಿಎಂಗೆ ಮಾಹಿತಿ ನೀಡಿದ್ದೇವೆ ಎಂದರು.

ಸಿಎಂ ಕೂಡ ಸಿಟ್ಟು ಮಾಡಿಕೊಂಡರು. ಸಣ್ಣ ಘಟನೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯಾಕೆ ಆಯ್ತು ಅಂತ ರೇಗಿದ್ರು. ಇದು ಬೇಕಾಗಿರಲಿಲ್ಲ, ಪೋಸ್ಟರ್‌ ಕಟ್ಟುವ ವಿಚಾರಕ್ಕೆ ಆಗಿದೆ. ಪಾಪ ಒಬ್ಬ ಕಾರ್ಯಕರ್ತ ನಿಧನಗೊಂಡಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು. ಫೈರಿಂಗ್ ಯಾವ ರೀತಿ ಆಗಿದೆ ಪೊಲೀಸರು ತನಿಖೆ ಮಾಡ್ತಿದ್ದಾರೆ. ನಾನು ಸಂಜೆ ಕೋಗಿಲು ಮೀಟಿಂಗ್‌ ಮುಗಿದ ಮೇಲೆ ಬಳ್ಳಾರಿಗೆ ಹೋಗ್ತೇನೆ. ಸಣ್ಣ ವಿಚಾರಕ್ಕೆ ಗಲಾಟೆ ಆಗಿರೋದು, ಇದು ಬೇಕಾಗಿರಲಿಲ್ಲ. ಸಹಾನುಭೂತಿ ಪಡೆದುಕೊಳ್ಳಲು ಬಿಜೆಪಿ ನಾಯಕರು ಘಟನೆ ಬಗ್ಗೆ ಏನೇನೊ ಹೇಳ್ತಿದ್ದಾರೆ ಎಂದು ಆರೋಪಿಸಿದರು. ಘಟನೆ ಸಂಜೆ ನಾಲ್ಕು ಘಂಟೆಯಿಂದಲೇ ಆರಂಭವಾಗಿದೆ‌. ಪಾಪ ಆ ಯುವಕನ ಮನೆಯವರ ಗತಿ ಏನಾಗಬೇಕು? ಅಮಾಯಕ ಪ್ರಾಣ ಕಳೆದುಕೊಂಡಿದ್ದಾನೆ ಎಂದರು.

  • Related Posts

    ಬೆಳ್ಳೋಡಿ ಕನಕ ಗುರುಪೀಠದಲ್ಲಿ ತ್ರಿವಿಧ ದಾಸೋಹದ ಸಂಭ್ರಮ: ಪೂಜ್ಯ ಶ್ರೀಗಳ ಜನ್ಮದಿನದ ಅಂಗವಾಗಿ ಬಿ.ವೈ. ವಿಜಯೇಂದ್ರ ಶುಭ ಹಾರೈಕೆ

    ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೋಡಿಯ ಶ್ರೀ ಕನಕ ಗುರುಪೀಠದ ಶಾಖಾ ಶ್ರೀಮಠದ ದಶಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇಂದು ಬಿಜೆಪಿ ರಾಜ್ಯ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಪಾಲ್ಗೊಂಡಿದ್ದರು. ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ…

    Continue reading
    ಬೆಂಗಳೂರು-ಮೈಸೂರು ರೈಲ್ವೆ ಮಾರ್ಗ ಪರಿವೀಕ್ಷಣೆ: ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ವಿ. ಸೋಮಣ್ಣ ಜಂಟಿ ಸುದ್ದಿಗೋಷ್ಠಿ

    ಮೈಸೂರು: ಬೆಂಗಳೂರು ಮತ್ತು ಮೈಸೂರು ನಡುವಿನ ರೈಲ್ವೆ ಸಂಪರ್ಕ ಹಾಗೂ ಮೂಲಸೌಕರ್ಯಗಳ ಕುರಿತು ಇಂದು ಕೇಂದ್ರ ಸಚಿವರುಗಳ ತಂಡ ಮಹತ್ವದ ಪರಿಶೀಲನೆ ನಡೆಸಿತು. ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ…

    Continue reading

    Leave a Reply

    Your email address will not be published. Required fields are marked *