ಜಿಲ್ಲಾ-ತಾಲೂಕು ಪಂಚಾಯ್ತಿ ಚುನಾವಣೆಗೆ ಜೆಡಿಎಸ್ ಏಕಾಂಗಿ ಹೋರಾಟ

ಹಾಸನ: ಜೆಡಿಎಸ್‌ ಎನ್‌ಡಿಎ ಜತೆ ಇದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋಗುತ್ತೇವೆ ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ಹೊಳೆನರಸೀಪುರ ತಾಲೂಕು ಹರದನಹಳ್ಳಿಯಲ್ಲಿ ಮನೆ ದೇವರು ದೇವೇಶ್ವರನಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿ, ಜಿಲ್ಲೆಯಲ್ಲಿ ರೇವಣ್ಣನವರ ಶಕ್ತಿ ಕುಂದಿಸಲು ಪಣ ತೊಟ್ಟಿರುವ ಹಾಗೆ ಕಾಣಿಸುತ್ತಿದೆ. ನಾನು ಈಗಾಗಲೇ ರೇವಣ್ಣಗೆ ಹೇಳಿದ್ದೇನೆ. ಈ ಜಿಲ್ಲೆಯಲ್ಲಿ ಯಾರು ಏನೇ ಸಭೆ ಮಾಡಿದರೂ ಅದಕ್ಕಿಂತ ಮೇಲ್ಮಟ್ಟದ ಸಭೆಯನ್ನು ಮಾಡಿ ಸಂದೇಶ ರವಾನಿಸಬೇಕು ಎಂದು ತಿಳಿಸಿದ್ದೇನೆ, ಎಂದರು.

”ಹಾಸನದ ಯಾವುದೇ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿ ನನಗೆ ದಿಗ್ಬಂಧನ ವಿಧಿಸಲು ಸಾಧ್ಯವಿಲ್ಲ. ರೇವಣ್ಣನ ಮುಗಿಸಲು ವ್ಯವಸ್ಥಿತವಾಗಿ ಹಾಸನದಲ್ಲಿ ಸಂಚು ನಡೆಯುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡನ ತೆಗೆದರು. ನಾನು ಪಿಎಂ ಆಗಬೇಕು ಅಂತ ಏನಾದರೂ ಅರ್ಜಿ ಹಾಕಿದ್ದೇನಾ. ದೈವಬಲದಿಂದ ಆಗಲಿಲ್ಲವೇ? ನಾನು ಅಧಿಕಾರಕ್ಕೆ ಅಂಟಿ ಕೂತ ವ್ಯಕ್ತಿಯಲ್ಲ. ಜನತೆಯ ಆಶೀರ್ವಾದದಿಂದ ಬದುಕಿದ್ದೇವೆ. ಇಂದು ನಮ್ಮ ಕುಲದೇವರಿಗೆ ಪೂಜೆ ಮಾಡಿದ್ದೇವೆ. ನಾವು ವಂಶ ಪಾರಂಪರ್ಯವಾಗಿ ಈಶ್ವರನ ಆರಾಧಕರು. 93 ವಯಸ್ಸಾದರೂ ಹೋರಾಟದ ಕೆಚ್ಚೆದೆ ಜನತೆ ಕೊಟ್ಟಿದ್ದು,” ಎಂದರು.

”ನಮ್ಮ ಆಡಳಿತದಲ್ಲಿ ಯಾವುದೇ ಸಮಾಜಕ್ಕೂ ಅನ್ಯಾಯವಾಗಿಲ್ಲ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ನಮ್ಮ ಗುರಿ,” ಎಂದು ತಿಳಿಸಿದರು. ”ನನಗೆ ಈಗ 93 ವರ್ಷ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿರಬಹುದು. ಆದರೆ ಹೋರಾಟ ನಿಲ್ಲದು. ನನ್ನ ಕಡೆಯ ಉಸಿರು ಇರುವ ತನಕ ಈ ಜಿಲ್ಲೆ ಮತ್ತು ಜನರಿಗಾಗಿ ಹೋರಾಡುತ್ತಲೇ ಇರುತ್ತೇನೆ,” ಎಂದರು.

  • Related Posts

    ಚಿತ್ತಾಪುರದ ಶ್ರೀ ಕೋಡಿಸಿದ್ದೇಶ್ವರ ಮಹಾಸಂಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ: ಶ್ರೀಗಳ ಆಶೀರ್ವಾದ ಪಡೆದ ಸಿಎಂ

    ಚಿತ್ತಾಪುರ: ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಇಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸುಕ್ಷೇತ್ರ ಸದ್ಗುರು ಶ್ರೀ ಕೋಡಿಸಿದ್ದೇಶ್ವರ ಮಹಾಸಂಸ್ಥಾನಕ್ಕೆ ಭೇಟಿ ನೀಡಿದರು. ಮಠಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು.Contentsಧಾರ್ಮಿಕ ದರ್ಶನ ಮತ್ತು ಆಶೀರ್ವಾದ:ಗಣ್ಯರ ಉಪಸ್ಥಿತಿ: ಧಾರ್ಮಿಕ ದರ್ಶನ ಮತ್ತು ಆಶೀರ್ವಾದ:…

    Continue reading
    ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ನಾಯಕರ ಹೇಳಿಕೆಗೆ ಆಕ್ರೋಶ: ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ನಾಯಕರ ಜಂಟಿ ಮಾಧ್ಯಮಗೋಷ್ಠಿ

    ಬೆಂಗಳೂರು: ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ರಾಜ್ಯ ಬಿಜೆಪಿ ನಾಯಕರು ನೀಡುತ್ತಿರುವ ಅವಹೇಳನಕಾರಿ ಹೇಳಿಕೆಗಳನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಈ ಸಂಬಂಧ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿ ನಡೆಸಿದ ಪ್ರಮುಖ ನಾಯಕರು, ಬಿಜೆಪಿಯ…

    Continue reading

    Leave a Reply

    Your email address will not be published. Required fields are marked *